← ಶ್ರೀಕೃಷ್ಣ

ಜಾಣ ನಿನಗೆ ಸರಿಗಾಣೆ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಜಾಣ ನಿನಗೆ ಸರಿಗಾಣೆ
ಪ್ರಮಾಣ ಕೊಟ್ಟ ತರುವಾಯ ತಪ್ಪುವ ನೀನಲ್ಲ

ಅಸುರ ತಾರಕನು ಸುಮನಸರ ಬಳಲಿಸುತಿರಲು
ಬಿಸಿಗಣ್ಣವನ ತಪಸು ಹಾನಿಮಾಡಿ
ಶಶಿವದನೆ ಪಾರ್ವತಿಯಲ್ಲಿ ಗರ್ಭವನಿಡಿಸಿ
ಹಸುಳೆ ಕೈಯಿಂದ ರಾಕ್ಷಸನ ಕೊಲ್ಲಿಸಿದೆ ||1||

ಶಂಬರ ದೈತ್ಯಜನ ವರದಿಂದ ಅನಿಮಿಷ-ಕ
ದಂಬವನು ಸೋಲಿಸಿ ಮೆರೆವುತಿರಲು
ಅಂಬುತನಯುದರದಲ್ಲಿ ಹೊಕ್ಕು ಬೆಳೆದದು ಬಂಡು
ಅಂಬರರು ನಲಿಯೆ ವನಶಿರವ ಚಂಡಾಡಿದಾ ||2||

ಮನಮುಟ್ಟಿ ನಿನ್ನನು ವಂದನೆಮಾಡಿ ನರಗೆ
ಮನದ ತಾಪವ ಬಿಡಿಸಿ ಮುಕ್ತಿ ಕೊಡುವಾ
ಘನ ಕೃಪಾನಿಧಿ ಸಿರಿ ವಿಜಯವಿಠ್ಠಲರೇಯನ
ಅನುಸರಿಸಿ ಬಾಳುವಂತೆ ಏಕಚಿತ್ತವನೀವಾ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.