← ಶ್ರೀಕೃಷ್ಣ

ಜೋಕುಮಾರನೆಂದು ಪಾಡಿದಳೊ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಜೋಕುಮಾರನೆಂದು ಪಾಡಿದಳೊ
ಲೋಕಮೋಹಿಸುವಂಥ ಹೋಲಿಕೆಯವನ ಗೋಪಿ

ಬಾಯಲ್ಲಿ ಬೆಣ್ಣೆ ಬಗೆಬಗೆ ವಯ್ಯಾರ
ಕಾಯ ನೋಡಿದರದು ಬಲು ಕಪ್ಪು
ಮಾಯದ ವೇಷದವ ಮನೆ ಮನೆ ತಿರುಗುವ
ಸ್ತ್ರೀಯರ ಕಾಣುತ ಭಂಡಾಟನಾಡುವ ||1||

ವಾವಿಗಳಿಲ್ಲದವಳ ತಾ ಮಾರಿ ಗಂಡು
ಆವಾಗ ಬಂದರಿವ ಇದೆ ತೆರನು
ದೇವದಾನವರೊಳಗಿವನೆ ಬಲು ಚಲುವ
ಕೇವಲ ನಾಚಿಕೆ ತೊರೆದ ಲಂಡನ್ನ ||2||

ಅಷ್ಟಮಿ ದಿನದಲ್ಲಿ ಒಬ್ಬರ ವಶನಾಗಿ
ಬುಟ್ಟಿಯೊಳಗೆಯಿದ್ದು ಹೊರಗೆ ಪೋಪಾ
ಪಟ್ಟ ಗುಡುಪಾ ನಮ್ಮ ವಿಜಯವಿಠ್ಠಲರೇಯಾಸೊಟ್ಟವಳನ ಬಿಡದಿಪ್ಪಕುವಲ್ಲಭಾ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.