← ಶ್ರೀಕೃಷ್ಣ

ತಿಳಿದು ವಿಚಾರಿಸು ವಿಶ್ವದಲ್ಲಿ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ತಿಳಿದು ವಿಚಾರಿಸು ವಿಶ್ವದಲ್ಲಿ
ಹಲವು ಜೀವಿಗಳೊಂದೆ ಪ್ರಕಾರ ಚರಿಸುವದು

ಇರವು ನೊಣ ಪೋದರೆ ಏನಾದರೂ ಕ್ಲೇಶ
ಬರುವುದೇ ಪ್ರತ್ಯಕ್ಷ ನೋಡಿದರು
ಭರದಿಂದ ಆಲಿಸು ದೇಹ ಮಾತುರ ಬ್ಯಾರೆ
ಇರುವದಲ್ಲದೆ ಒಳಗೆ ಚೇತನಾಡುವದೊಂದೆ ||1||

ಕೂಡಿಕೊಂಡವು ತಮ್ಮತಮ್ಮೊಳಗೆ ಭೂತಗಳು
ಆಡಲೇನದು ಪೂರ್ವದ ನಿರ್ಮಾಣ
ನಾಡೊಳಾಗಿದ್ದನಿತೆ ಸಮ್ಮಂಧವಲ್ಲದೆ
ಬೀಡು ತೊರದಾಮ್ಯಲೆ ಬಿಂಕವೆತ್ತಣದೊ ||2||

ಹರಿಮಾಯದಿಂದಲಿ ನಾನು ನನ್ನದು ಎಂಬ
ಗರುವಿಕೆ ಪುಟ್ಟುವದು ಮೋಹ ಪೆಚ್ಚಿ
ನಿರಯದೊಳಿಳಿಯದೆ ವಿಜಯವಿಠ್ಠಲನ
ಸ್ಮರಣೆಯಲಿ ಕುಣಿದಾಡು ಎಲ್ಲ ಸಮನ ನೋಡು||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.