← ಶ್ರೀರಾಮ

ತುರುಕರಿಲ್ಲದ ಮನೆ ದಿರದಿಮ್ಮನೆ

📂 ಶ್ರೀರಾಮ
✍️ ವಿಜಯದಾಸ
🏷️ ಕೀರ್ತನೆಗಳು
ತುರುಕರಿಲ್ಲದ ಮನೆ ದಿರದಿಮ್ಮನೆ

ತುರಕರ ನೋಡದ ಕಣ್ಣು ಶಿಖಿಗರಿಗಣ್ಣು
ತುರಕರಿಗೆರಗದ ತಲೆ ಕಗ್ಗತ್ತಲೆ
ತುರಕರ ಕಥಾಶ್ರವಣ ಕೇಳದ ಕರ್ಣ ಈಚಲಪರ್ಣ
ತುರಕರುವಿನುಚ್ಛಿಷ್ಟ ಉಣ್ಣ ಬಾಯಿ ವಿಷಗಾಯಿ ||1||

ತುರಕರನಾಘ್ರಾಣಿಸದ ಮೂಗು ಅಡವಿಯ ಕೂಗು
ತುರಕರಸೇವೆಸದಕರ ವಿಕಾರ ಪಾಮರ
ತುರಕರ ಕೊಂಡಾಡದ ಜಿಹ್ವೆ ಅಧಮನ ಗುಂಹೆ
ತುರಕರನೊದೆವ ಕಾಲು ಯಮನ ಪಾಲು ||2||

ತುರಕರ ಪ್ರಸಾದ ಉಣ್ಣದ ಹೊಟ್ಟೆ ಗೂಗಿನ ಮೊಟ್ಟೆ
ತುರಕರನ ಚಿಂತಿಸದ ಮನ ಗಾರ್ಧಭ ಗಮನ
ತುರಕರ ಕಾಯ್ದ ವಿಜಯವಿಠ್ಠಲರೇಯ
ತುರಕರ ಕರುಣ ಪಡೆಯದವನು ಶುದ್ಧ ಶವನು||3||
← ಶ್ರೀರಾಮ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.