← ಶ್ರೀರಾಮ

ದಯ ಬಾರದ್ಯಾಕೊ ರಾಘವಾ

📂 ಶ್ರೀರಾಮ
✍️ ವಿಜಯದಾಸ
🏷️ ಕೀರ್ತನೆಗಳು
ದಯ ಬಾರದ್ಯಾಕೊ ರಾಘವಾ
ಕಾಯಬೇಕು ಯೆಂದು ಕೊರಗಿ ಮೊರೆಯಿಡೆ
ನ್ಯಾಯವೇನು ಯೆನ್ನ ಮರತುಬಿಡುವದು

ಅಂದು ಅಜಮಿಳನು ಅಂತ್ಯಕಾಲದಲ್ಲಿ
ಕಂದ ನಾರ ಬಾಯೆಂದು ಕರಿಯಲು
ಅಂದ ಮಾತುಗಳಿಗೆ ಅತಿ ಹರುಷಿಸಿ
ಬಂದ ಯಮನ ಬಾಧೆ ಬಿಡಿಸಲಿಲ್ಲವೇನೊ ||1||

ಹರಿಯೆ ಗತಿಯೆಂದು ಹೊಗಳು ಕಂದನ
ಹರುಷವಿಲ್ಲದೆ ಪಿತ ಕಷ್ಟಪಡಿಸಲು
ಊರು ತೋರದಂತಾ ಸ್ತಂಭದಿಂದ ಬಂದು
ಮೂರು ಜಗವು ಅರಿಯೆ ಮನ್ನಿಸಲಿಲ್ಲವೇನೊ ||2||

ಸರ್ಪಶಯನನೆ ಸಾರ್ವಭೌಮನೆ
ಶೂರ್ಪನಖಿ ನಾಸಿಕ ಶ್ರೋತ್ರವಳಿದನೇ
ಅಪ್ಪ ಗುರುವರ ವಿಜಯವಿಠ್ಠಲನೇ
ಒಪ್ಪದಿಂದ ವಲಿವ ವರದರಾಜನೇ ||3||
← ಶ್ರೀರಾಮ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.