← ಶ್ರೀಕೃಷ್ಣ

ದೇಶದೊಳಗೀ ಕ್ಷೇತ್ರ ಬಲು ಉತ್ತಮಾ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ದೇಶದೊಳಗೀ ಕ್ಷೇತ್ರ ಬಲು ಉತ್ತಮಾ
ದಾಸೋಹಂ ಎಂದೆನಲು ಗತಿಗೆ ಪಥವ ಕೊಡುವ

ಹರಿಸರ್ವೋತ್ತಮನೆಂದು ನೆರಪಿದಂಥ ಮುನಿ
ವರನ ಶಾಪದಲಿ ಪಾವಕನು ಬಂದು
ಪರಮತಪ ಮಾಡಿದನು ವರವಿತ್ತ
ಹರನೊಲಿದು ಧರೆಯೊಳಗೆ ಈ ದೇವನಿ
ಪುಷ್ಕರಣಿ ಎನಿಸುವುದು||1||

ದಿವಿಜರಿಗೆ ಸೋತು ದಾನವರು ಶುಕ್ರಗೆ ಹೇಳಿ
ಶಿವನೊಲಿಸೆ ಅಮೃತವ ಮಾಳ್ಪೆನೆಂದು
ಕವಿ ಇಲ್ಲೆ ತಪಮಾಡೆ ಅಂದು ಸುರಧೇನು ವಾ
ಸವನ ಕೈಕೊಳಲು ಶ್ರೀರಾಮನಿಂದಲಿಗತಿ ||2||

ರಾಯ ಋಷಿಗಾಧೇಯು ಬ್ರಹ್ಮತ್ವಗೋಸುಗ
ಗಾಯತ್ರಿ ಒಲಿಸಿದನು ಈ ಸಿಲೆಯಲೀ
ಆಯು ಉಳ್ಳದರೊಳಗೆ ಇಲ್ಲಿ ಕುಳಿತು ಬಂದು
ಗಾಯತ್ರಿ ಮಂತ್ರವನು ಜಪಿಸೆ ನರನು ಮುಕ್ತಾ ||3||

ಅಗಸ್ತೀಶ್ವರವಿಡಿದು ರಾಮಲಿಂಗ ಪರಿಯಂತ
ಬಗೆಬಗೆ ತೀರ್ಥ ಎರಡೊಂದು ಪದ್ಮ
ಮಿಗೆ ಷೋಡಶಕೋಟಿ ಅರವತ್ತು ಸಾವಿರ
ಸೊಗಸಾಗಿವಿಪ್ಪವಿಲ್ಲಿ ಕಾವೇರಿ ಮಧ್ಯದಲ್ಲಿ ||4||

ರಾಮನಾಥನ ಪುರವೆಂಬೊ ಪೆಸರೆ ಉಂಟು
ವ್ಯೋಮಕೇಶನು ನಾಲ್ಕು ಹೆಸರಿನಿಂದಾ
ತಾ ಮಹೋತ್ಸವದಿಪ್ಪ ವಿಜಯವಿಠ್ಠಲನಂಘ್ರಿತಾಮರಸ
ಧ್ಯಾನವನು ಮಾಡುತ ಭಕ್ತರ ಪೊರೆವಾ||5||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.