← ಶ್ರೀಕೃಷ್ಣ

ದೋಷ ದೂರ ಜನಾರ್ದನ ದೋಷ ದೂರಾ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ದೋಷ ದೂರ ಜನಾರ್ದನ ದೋಷ ದೂರಾ
ದೋಷ ದೂರ ಎನ್ನ ಸಾಕುವುದು ಪರಾಶರವರದಾ

ಬಲು ಕಾಲಗಳಿಂದ ನೆಲೆಯ ಕಾಣದೆ ನಿನ್ನ
ಚೆಲುವ ಚರಣ ದ್ವಂದ್ವ ನೆಳಲನಾಶ್ರೈಸಿದೆ ||1||

ಕಂಡೆ ನಾ ನಿನ್ನಯ ಪುಂಡರೀಕ ಪಾದ
ಚಂಡಾಘ ತಿಮಿರ ಮಾರ್ತಾಂಡ ಮುರವೈರಿ ||2||

ಅಜಗೆ ಪ್ರಸನ್ನ ವಿರಜಭಾಗ್ಯ ಸಂಪನ್ನ
ವಿಜಯಮೂರುತಿ ನಮ್ಮ ವಿಜಯವಿಠ್ಠಲರೇಯ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.