← ಶ್ರೀಕೃಷ್ಣ

ನಂಬಿದೆನೊ ನಿನ್ನ ಪಾದಾರವಿಂದಾ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ನಂಬಿದೆನೊ ನಿನ್ನ ಪಾದಾರವಿಂದಾ
ಇಂಬು ಈವದು ಎನಗೆ ವೈಕುಂಠಪುರದೊಳಗೆ

ಮಲಭಾಂಡದಲ್ಲಿ ಪೊಕ್ಕು ನೆಲೆಗಾಣದಲೆ ಸಿಕ್ಕು
ಸಲೆ ಸೊರಗಿ ತಿರುಗಿದೆನೊ ಬಳಲಿ ಮರುಗಿ
ಉಳಿವದಕುಪಾಯವನು ಒಂದರೆ ಕಾಣೆನೊ
ಎಲೊ ಬಲುದೈವ ನೀನೆ ದಯಾಳು ಎಂದೂ ||1||

ಕಂಡಮಾರುತದಲ್ಲಿ ಕೈವಲ್ಯ ಕೊಡುವಲ್ಲಿ
ಮಂಡಲದೊಳು ಎಣಿಯಾರು ನಿನಗೆ
ಭಂಡಕಾಯವ ತೆತ್ತು ಬರಲಾರೆ ನಿನ್ನ ತೊತ್ತು
ತೋಂಡರೊಳು ಇಡು ನಿತ್ಯ ಎಳೆನೋಟದಲಿ ನೋಡು ||2||

ಯದುಕುಲಲಲಾಮ ಸುರಸಾರ್ವಭೌಮ ಮಹಿಮ
ಮದನಪಿತ ಕಾಳಿಂಗಭಂಗ ರಂಗಾ
ಮಧುಸೂದನ ವಿಜಯವಿಠ್ಠಲ ಲಕುಮಿನಲ್ಲಾ
ಹೃದಯದೊಳು ಪೊಳೆವ ಬಲು ವಿಚಿತ್ರ ಚಲುವಾ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.