← ಶ್ರೀಕೃಷ್ಣ

ನಂಬಿದ್ದೆನೆಲೊ ದಾತ ಅಂಬುಜಾಸನ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ನಂಬಿದ್ದೆನೆಲೊ ದಾತ ಅಂಬುಜಾಸನ ತಾತ
ಕುಂಭಿಣಿಯೊಳು ಪುಟ್ಟಿ ಜನನಿಯ ಮೊಲೆ ಪಾಲು
ಉಂಬೋದು ಬಿಡಿಸೊ ಜನನವ ಕೆಡಿಸೊ

ರಸಿಕೆ ಮುಹಕದಲಿ ನಿಶಿದಿನದಲಿ ಹೊರಳಿ
ಅಸುರುಸುರೆನುತಲಿ ಹಸಗೇಡಿಯಾದೆನೊ
ಅಸವು ನನ್ನದು ಎಂದು ಈ ಪರಿ ನೊಂದು ||1||

ಹಲವು ಲಂಪಟದೊಳು ಹಲುಬಿ ಹಕ್ಕಲನಾದೆ
ಬಲೆಯೊಳಗಿದ್ದ ಎರಳೆಯಂತೆ ಮಿಡುಕುತ
ಮಲಮೂತ್ರದೊಳು ಬಳಲಿದೆ ಕೇಳೊ ||2||

ಎಳ್ಳನಿತು ಸತ್ಕರ್ಮವುಳ್ಳದ್ದು ಚರಿಸಿದೆ
ಬಲಿಷ್ಠ ನಾನೆಂದು ಬಲು ದುರ್ಮತಿಯಿಂದ
ಎಲ್ಲರ ಜರಿದೆ ಧರ್ಮವ ಮರೆದೆ ||3||

ಚಾರುವಾಕರಗೂಡಿ ಮೂರೆ ವಿಕಾರದಲ್ಲಿ
ನೀರೇರ ಒಡಗೂಡಿ ನೀತಿ ನಿರ್ಣಯ ತೊರೆದು
ತಾರಿ ಬರಿದೆ ಕೆಟ್ಟೆ ಮುಂದೇನು ಬಟ್ಟೆ ||4||

ಎಲ್ಲಿರಲು ನಿನ್ನವನೋ
ಅಲ್ಲವೆಂದೆನಿಸದೆ ಬಲ್ಲಿದರೊಡಿಯ ವಿಜಯವಿಠ್ಠಲ ನಿ
ನ್ನಲ್ಲಿ ಸೇರಿಸಿ ಎನ್ನ ಪೊರೆಯೋ ಪ್ರಸನ್ನಾ ||5||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.