← ಶ್ರೀಕೃಷ್ಣ

ನಾಡ ದೈವಗಳ ಪೂಜೆಯನು

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ನಾಡ ದೈವಗಳ ಪೂಜೆಯನು ಮಾಡಿದರೆ |
ಕೇಡಲ್ಲದೆ ಮತ್ತೆ ಕೈವಲ್ಯವುಂಟೇ

ಕೊಳಚಿ ನೀರನು ದಾಟಲರಿಯದ ಮನುಜಗೆ
ನಿಲವುದ್ದ ದ್ರವ್ಯ ಕೊಡುವೆ ಎನ್ನ ನಾ- |
ಜಲನಿಧಿಯ ಉತ್ತರಿಸಿಕೊಂಡು ಎಂದರೆ ಅವನು |
ಅಳಿಯದಂತೆ ದಡಕೆ ತರಬಲ್ಲನೇ ||1||

ಕತ್ತಲೆಗಂಜುವನ ಕರೆತಂದು ಶೃಂಗರಿಸಿ |
ಉತ್ತಮದ ವಾಜಿವಾಹನವ ಮಾಡಿ ||
ಕತ್ತಿಯನು ಕರದಲ್ಲಿ ಕೊಟ್ಟು ರಿಪುಪರಿವಾರ- |
ದತ್ತ ಒಂದಡಿಯಿಟ್ಟು ಬರಬಲ್ಲ್ಲನೇ ||2||

ತನಗೆ ಬಂದಾವಸ್ತು ಪರಿಹರಿಸಿಕೊಳ್ಳದೆ ಪರ- |
ಮನ ವಿಡಿದು ಭಜಿಸಿದರೆ ಏನಾಗದೊ ||
ಬಿನಗು ದೈವರಗಂಡ ಶ್ರೀ ವಿಜಯವಿಠ್ಠಲನ |
ವನಜಪದ ನೆನೆದರೆ ಮುಕುತಿಯುಂಟು ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.