← ಶ್ರೀಕೃಷ್ಣ

ನಾನು ನಿನ್ನ ಸೇವಕ ಏನಾದರೂ ಬರಲಿ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ನಾನು ನಿನ್ನ ಸೇವಕ ಏನಾದರೂ ಬರಲಿ ನಿನ್ನ ಬಿಡುವನೆ ರಂಗಾ

ಅಪತ್ತೆ ಬರಲಿ ಅತಿಶಯದ ಕ್ಲೇಶವೇ ಬರಲಿ
ಕೋಪ ಕಾಮಾದಿಗಳು ವೆಗ್ಗಳಿಸಲಿ
ಪಾಪದ ರಾಶಿಗಳು ಬಂದು ಬೆನ್ನಟ್ಟಲಿ
ಶ್ರೀಪತಿ ನಿನ ಪಾದವನು ಬಿಡಬಲ್ಲನೆ ||1||

ಯಮನಪುರದ ಬಟ್ಟೆ ಅತಿ ಕಠಿಣವಾಗಲಿ
ಯಮನಾಳು ಬಲು ಭಯಂಕರರಾಗಲಿ
ಯಮನು ದಂಡಿಸಿ ತೀವ್ರ ನಿರಯದೊಳಗೆ ಇಡಲಿ
ಕಮಲನಾಭನೆ ನಿನ್ನ ಪಾದವನು ಬಿಡಬಲ್ಲನೆ||2||

ಲೋಕದೊಳಗಿದ್ದ ಜನರಿಗೆ ಬಪ್ಪ ದೋಷಗಳು
ಏಕವಾಗಿ ಎನಗೆ ಬರಲಿ ಇಂದೆ
ನಾ ಕಳವಳಿಸಿದರು ನಿನ್ನಂಘ್ರಿಯಗಳಾಣೆ
ಶ್ರೀಕಾಂತ ವಿಜಯವಿಠ್ಠಲರಂಗ ಕೇಳೊ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.