← ಶ್ರೀಕೃಷ್ಣ

ನಿನ್ನ ಮನಸಿಗೆ ಬಂತೆ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ನಿನ್ನ ಮನಸಿಗೆ ಬಂತೆ ಪ್ರಾಣನಾಥಾ
ಚಿಣ್ಣನೆಂದು ನೋಡದಲೆ ಕರಿಯಲಟ್ಟಿದೆ ವೇಗ

ಸಾಕಿದೆನು ನಿನ್ನ ದಾಸನೆಂದು ತಿಳಿದು ವಿ- |
ವೇಕದಿಂದಲಿ ಉಪನಯನ ಮಾಡೀ |
ಲೋಕದೊಳಗೆ ಬೆಳಸಿ ಮುದುವೆಯ ಮಾಡಿ ಅ-
ನೇಕ ತೀರ್ಥಯಾತ್ರೆ ತಿರುಗಿದವನಾ ಇಂದೆ 1
ಉದ್ಧಾರವಾಗುವೆನು ಕುಲಕೋಟಿ ಸಹಿತೆಂದು
ಪದ್ದಿಟ್ಟುಕೊಂಡಿವೈ ಈ ತರಳನ
ಸುದ್ದಿ ತಿಳಿಯಗೊಡದೆ ವಿಯೋಗ ಮಾಡಿಸಿದೆ
ಸಿದ್ಧ ಮಾಡಿದೆ ನಿನ್ನ ಸಂಕಲ್ಪವೆ ಇಂದು ||2||
ನೆಚ್ಚಿ ನಿನ್ನ ಪಾದ ಭಜಿಸುವರಿಗೆ ಭಾಗ್ಯ
ಹೆಚ್ಚುಗೊಡದಿಪ್ಪನೆಂದು ಬಿರುದು ಧರಿಸಿ
ನಿಚ್ಚ ಮೆರೆವಾ ಮಹಿಮ ವಿಜಯವಿಠ್ಠಲರೇಯ
ಅಚ್ಚ ಭಕುತರ ಪ್ರಿಯ ವೈಕುಂಠಕೆ ಇಂದೆ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.