← ಶ್ರೀಕೃಷ್ಣ

ನಿನ್ನ ವಶದಲಿ ಇದ್ದು ಇದ್ದು

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ನಿನ್ನ ವಶದಲಿ ಇದ್ದು ಇದ್ದು
ಮುನ್ನೆ ದುರ್ವೃತ್ತಿಗೆ ಪೋಗುವುದೆನ್ನ ಮನಾ ||ಪ||

ಚಿತ್ರವಾದ ಕರಿಯ ಶೃಂಗರಿಸಿ ಮೇಲೆ
ಛತ್ರಿಗೆ ನೆರಳಲ್ಲಿ ಕುಳ್ಳಿರೆನೆ
ಆನೆ ಕೆಳಗೆ ಇಳಿದು ಬೂದಿಯೊಳಗಿಪ್ಪ
ಕತ್ತೆ ಏರುವನೆಂದು ಇಚ್ಛೆ ಮಾಡುತಲಿದೆ ||1||

ಕಾಲಕಾಲಕೆ ಸುಧಿಯ ಸವಿದು
ಮಾಣಿಕದ ಉಯ್ಯಾಲೆ ಮೇಲಾಡುತ್ತ ಬಾಳು ಎನೆ
ತಾಳವೃಕ್ಷವನೇರಿ ತಲೆಕೆಳಗಾಗಿ ತಾ
ಬೀಳುವೆನೆಂದು ಅಪೇಕ್ಷೆ ಮಾಡುತಲಿದೆ ||2||

ವೇಣಿ ಮಾಧವರಾಯಾ ನಿನ್ನ ಚರಣಾಂಬುಜ
ಕಾಣುವ ಪ್ರಕಾಶ ಉದಾಸಸಿ
ಕ್ಷೋಣಿಯೊಳಗೆ ಮಹಾ ಕತ್ತಲೆ ಬಯಸುವೆ
ಹೀನನಂತೆಯಾದೆ ವಿಜಯವಿಠ್ಠಲರೇಯಾ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.