← ಶ್ರೀಕೃಷ್ಣ
ನಿನ್ನನೆ ಪಾಡುವೆ
ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ
ನಿನ್ನನೆ ಬೇಡಿ ಬೇಸರಿಸುವೆ ||
ನಿನ್ನನೆ ಬೇಡಿ ಬೇಸರಿಸುವೆ ||
ನಿನ್ನ ಕಾಲ ಪಿಡಿವೆ ನಿನ್ನ ಹಾರೈಸುವೆ
ನಿನ್ನ ತೊಂಡರಿಗೆ ಕೈಯ ಕೊಡುವೆ ||
ನಿನ್ನ ತೊಂಡರಿಗೆ ಕೈಯ ಕೊಡುವೆ ||
ನಿನ್ನಂತೆ ಸಾಕಬಲ್ಲ ದೇವರಿನ್ನುಂಟೆ
ಘನ್ನ ಪುರಂದರವಿಟ್ಠಲ ದೇವರದೇವ ||
ಘನ್ನ ಪುರಂದರವಿಟ್ಠಲ ದೇವರದೇವ ||