← ಶ್ರೀಕೃಷ್ಣ

ನೀನೆ ದೀನಜನ ಬಂಧೂ ದಯಾರಸ ಸಿಂಧೂ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ನೀನೆ ದೀನಜನ ಬಂಧೂ ದಯಾರಸ ಸಿಂಧೂ

ದಿವಿಜರ ಸಮುದಾಯವಿದ್ದರೇನು
ಅವನ ವ್ಯಾಳೆಗೆ ಒದಗಲಿಲ್ಲಾ
ಅವನಿವಲ್ಲಭ ಅವ್ಯಯವೆಂದರೆ
ಅವಸರಕ್ಕೊದಗಿ ಕಾಯದೇ ಕೃಷ್ಣಾ ||1||

ಭೂತ ಪರಿವಾರವಿದ್ದರೇನು
ಆತನ ಅಭಂಗಕ್ಕೆ ಒದಗಲಿಲ್ಲಾ
ಪೂತಾತ್ಮ ಪುರುಷೋತ್ತಮನೆಂದರೆ
ಚಾತುರ್ಯದಿಂದ ಸಲಹಿದೆ ಕೃಷ್ಣಾ ||2||

ಚತುರಾಸ್ಯಾದಿಗಳು ಇದ್ದರೇನು
ಶ್ರುತಿಯಹಾನಿರೆ ಒದಗಲಿಲ್ಲಾ
ಚತುರಾತ್ಮ ಸಿರಿಪತಿ ಉರಗಾದ್ರಿ
ಪತಿ ವಿಜಯವಿಠ್ಠಲನೇ ಕಾಯ್ದ ಕೃಷ್ಣಾ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.