← ಶ್ರೀಕೃಷ್ಣ

ನೀನೆ ಮಾಡಿದ ಲೀಲೆ ಬಲು ಸುಖವೊ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ನೀನೆ ಮಾಡಿದ ಲೀಲೆ ಬಲು ಸುಖವೊ |
ಆನೇನು ದು:ಖವನು ಬಡುವುದಿಲ್ಲವೋ ಜೀಯ |

ತೋಟವನು ಮಾಡಿಸಿ ಅದರೊಳಗೆ ಒಂದು ಫಲ |
ನಾಟಿಸಲು ಬೆಳೆದ ಫಲ ಪಕ್ವವಾಗೆ |
ನೀಟಾದ ಫಲವೆಂದು ಅರಸು ಕೊಯ್ ತರಿಸಲು
ತೋಟಿಗಾಗೇನು ದು:ಖ ಅರಸಿನಿಂಗೇನೈಯ||1||

ನಿನ್ನ ಸಂಕಲ್ಪನೆ ಸ್ಥಿರವಾಗಿ ಇದೆ ಇದೆ
ಅನಂತ ವೇದಗಳು ಪೊಗಳೂತಿವಕೊ
ಪನ್ನಗಶಯನನೆ ನೀನು ಮಾಡಿದ ಕ್ಲುಪ್ತ
ಅನ್ಯಥಾವಾಗುವದೆ ಅನುಭವಾದಿಗಳಿಗೆ ||2||

ಸುಖ ದು:ಖವೆ ಎರಡು ನಿನ್ನ ವಶವಾಗಿದೆ
ಸಖನಾಗಿ ಸುಖ ಉಣಿಸಲು ಹಿಗ್ಗುವೆ
ದು:ಖ ತಂದಿತ್ತರೆ ಅಳಲಿ ಬಳಲುವದ್ಯಾಕೆ
ಅಖಿಳ ನೀನಾವದಿತ್ತದೇ ಬಲು ಲೇಸು ||3||

ನೀನೆ ಕಲ್ಪಿಸಿದರೆ ಸೈರಿಸಲಾರದೆ ವೇಗ |
ನಾನು ವ್ಯಧಿಕರಣ ಪೇಳಿದರಾಯಿತೆ |
ಆನಂದಕೆ ಹ್ರಾಸ ಬರುವುದೆ ಶಾಶ್ವತ |
ಏನಾದರೇನು ನೀನಾಡಿದಾಟವೆ ಸಮ್ಮತ ||4||

ಸತ್ಪಾತ್ರರಾ ನೋಡಿ ದಾನವಿತ್ತರೆ ಅವಗೆ |
ಉತ್ತಮಾ ಪದ ಉಂಟು ಪುಶಿಯಲ್ಲವೋ |
ಸತ್ಪಾತ್ರ ನೀನೆಂದು ಪುತ್ರಾಖ್ಯ ಧನವಿತ್ತೆ |
ಉತ್ತುಮಾ ಗತಿ ನೀಯೋ ವಿಜಯವಿಠ್ಠಲ ಕರುಣಿ ||5||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.