← ವೈರಾಗ್ಯ

ನಿನ್ನ ಬಾಳಿನ ಹೊಲವು

📂 ವೈರಾಗ್ಯ
✍️ ವಚನವೇದ
🏷️ ಕೀರ್ತನೆಗಳು
🎵 ರಾಗ: ಬಾವುಲ್
🥁 ತಾಳ: ಝಪತಾಲ
ನಿನ್ನ ಬಾಳಿನ ಹೊಲವು ಪಾಳು ಬಿದ್ದಿಹುದಲ್ಲೊ
ಕೃಷಿಗೈಯಲೂ ಕೂಡ ತಿಳಿಯದಿರುವೆ |
ಎಂಥ ಹೊನ್ನನು ಬೆಳೆದು ತೆಗೆಯಬಹುದಾಗಿತ್ತೊ
ಕೆಲವು ದಿನ ಮೈಮುರಿದು ದುಡಿದಿದ್ದರೆ ||
ಈಗಲಾದರು ತಾಯ ಶ್ರೀನಾಮವೆಂತೆಂಬ
ಬೇಲಿಯನು ಕಟ್ಟಿ ನೀ ಕಾಯ್ದುಕೊಳ್ಳೊ |
ಅದಕಿಂತ ಬಲವಾದ ಕಾವಲಿನ್ನಾವುದಿದೆ
ಮೃತ್ಯುವೂ ನಿನ್ನ ಬಳಿ ಬರಲಾರನೊ ||
ಇಂದೊ ನಾಳೆಯೊ ಹೊಲವ ಹೊಲದೊಡೆಯಗೊಪ್ಪಿಸುವ
ಮುನ್ನವೇ ಎಚ್ಚೆತ್ತು ಬೆಳೆಯ ತೆಗೆಯೊ ।
ಗುರುವಿತ್ತ ಮಂತ್ರವನು ಬೀಜವಾಗಿಸಿ ಬಿತ್ತಿ
ಪ್ರೇಮವಾರಿಯ ಹೊಯ್ದು ಹಸನುಗೊಳಿಸೊ ।
ನಿನಗೆ ಈ ಕೆಲಸವೂ ಕಷ್ಟವಾದರೆ ಹೇಳು
ರಾಮಪ್ರಸಾದನಿದೊ ನೆರವಿಗಿಹನೊ ||
← ವೈರಾಗ್ಯ ವಚನವೇದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.