← ಶ್ರೀಕೃಷ್ಣ

ನೆನೆಸು ಮನವೆ ನಲಿವಿನಿಂದಲಿ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ನೆನೆಸು ಮನವೆ ನಲಿವಿನಿಂದಲಿ
ನೆನೆಸು ಮನವೆ ನಲಿವಿನಿಂದಲಿ
ಮನಸಿಜನ್ನ ಪೆತ್ತ ಹರಿಯ
ವನಜ ಚರಣವನ್ನು ಹೃ
ದ್ವನಜದೊಳಗೆ ನಿಲಿಸಿ ನಗುತ

ಪ್ರಳಯದಲ್ಲಿ ವರ ರಮಾ ಕ
ಳವ ತಾಳಿ ಲೀಲೆಯಲ್ಲಿ
ಪೊಳವ ಕಂಗಳಿಂದ ಕಿಡಿ
ಗಳನು ತೋರಿ ಕುಣಿವುತ
ಜಲಜ ಪೀಠ ಸುರಪ ಪುಲಿದೊ
ಗಲ ವಸನ ಉಳಿದ ಸುರರ
ಅಳಿದು ಏಕಮೇವನಾಗಿ
ನಲಿವ ನಾರಸಿಂಹನೆಂದು ||1||

ಜರಾಮರಣರಹಿತ ಸುಜ
ನರನ ಕಾಯ್ದು ಕರುಣದಲ್ಲಿ
ಜರಿದು ಅದ್ರಿಯಲ್ಲಿ ದನುಜರನ್ನು ಶೀಳಿ ವೇಗ ನಿ
ರ್ಜರರ ಪೊರೆದು ನಿಗಮತತಿಗೆ
ಪರಮನೆಂದೆನಿಸಿ ಚರಿಸುತಿಪ್ಪ
ಅರುಣಪ್ರಭೆಗೆ ಕೋಟಿ ಮಿಗಿಲು
ಪರಮಪುರುಷ ಸಿರಿಧರನ್ನ ||2||

ಕೆಡದೆ ಪರಮ ಭಕುತಿ ಮಾರ್ಗ
ವಿಡಿದು ಗರ್ವವೆಂಬ ಕವಚ
ತೊಡದೆ ದುರುಳ ಚೇತನಕ್ಕೆ
ಕೊಡದೆ ಮನಸು ವಿನಯದಿಂದ
ಕಡಲಶಯನನಾದ ಒಡಿಯ ವಿಜಯವಿಠ್ಠಲನ್ನ
ಬಿಡದೆ ನುಡಿಯೆ ಬಂದ ಅವ
ಘಡವ ದಾಟಿಸು ವೊಲಿದು ಕಾಯುವಾ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.