← ಶ್ರೀಕೃಷ್ಣ

ನೋಡಿ ನಾ ಧನ್ಯನಾದೆನೊ ತೋತಾದ್ರೀಶನ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ನೋಡಿ ನಾ ಧನ್ಯನಾದೆನೊ ತೋತಾದ್ರೀಶನ
ನೋಡಿ ಧನ್ಯನಾದೆ ನಾಡೊಳು ತನಗೆಲ್ಲಿ
ಈಡಿಲ್ಲೆನಿಸುವನ ನೋಡಿ ಧನ್ಯನಾದೆನೊ

ಆರೊ ಮಹಾರೂಪ ಬಂದು ಏಕಾಂತದಲ್ಲಿ
ಆರಾಧಿಸಿದಾತನಂದು ಭಕುತಿ ಬಿಡದೆ
ವಾರವಾರಕ್ಕೆ ಗತಿಯೆಂದು
ಈ ರೀತಿಯಲ್ಲಿ ಇರೆ ತೋರಿದ ಕರುಣ ನಿನ್ನಾ ||1||

ಭಕುತನ್ನ ತಪಸಿಗೊಲಿದು ವೇಗದಿಂದಲಿ
ಲಕುಮಿ ರಮಣ ಸುಳಿದು ಬೇಡಿದಂಥಾ
ಧಿಕವಿತ್ತು ರೋಷವಳಿದು ಸುಖದ ಭಾರತ ಪೇಳೊ
ದಕ್ಕೆ ಮುನಿ ಮಾಡಿದ ದಾನಾ ||2||

ಧರಿಗೆ ದಕ್ಷಿಣ ದಿಕ್ಕಿಲಿ ಮಾಹೇಂದ್ರಿ ಮಹಿ
ಧರನ ಸಮೀಪದಲ್ಲಿ ಪ್ರತಿದಿನ
ಮೆರೆವ ವೈಭೋಗದಿಂದಲಿ
ಕರುಣಿ ವಿಜಯವಿಠ್ಠಲ ವರಧೇನು ಎನಿಸುವನಾ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.