← ಶ್ರೀಕೃಷ್ಣ

ಪರಮಾತ್ಮನೆ ನೀ ಸರಿ ಎಂದು

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಪರಮಾತ್ಮನೆ ನೀ ಸರಿ ಎಂದು
ಕರಗದ ತಮದಲ್ಲಿ ಸೇರುವದೆ

ಜೀವ ಪರಮಾತ್ಮಗೆ ಭೇದವ
ಆವಾವ ಕಾಲಕ್ಕೆಯಿಲ್ಲವೆಂದು
ದೇವನ ಬಳಿಗೆ ನೀ ದೂರಾಗಿ
ಈ ವಸುಧೆಯೊಳು ಬದುಕುವರೆ ||1||

ಭೇದ ಜೀವಕೆ ಜೀವ ಎಂದಿ
ಗಾದರು ಇಲ್ಲವೆಂದು ನುಡಿದು
ಈ ದುರಾಚಾರದಲ್ಲಿ ನಡೆದು
ಮಾದಿಗನಂತೀಗ ಮಾರ್ಮಲಿದು||2||

ಜಡ ಪರಮಾತ್ಮ ಜಡ ಜಡಕೆ
ಜಡ ಜೀವಕೆ ಅಭೇದವೆಂದು
ಕಡುಗರ್ವದಿಂದಲಿ ಉಚ್ಚರಿಸಿ
ಮಡಿದು ನರಕಕ್ಕೆ ಉರುಳುವರೆ ||3||

ಅರಸಿನ ಬಳಿಗೆ ತೋಟಿಗ ಬಂದು
ಅರಸೆ ನೀನೆ ನಾನೆಂದಡೆ
ಉರವಣಿಸಿ ಕೊಲ್ಲಿಸಿ ಅವನ
ಶೆರಿಯ ಹಾಕದೆ ಮನ್ನಿಸುವನೆ ||4||

ದಾಸನ ದಾಸನು ಎಂದು
ಏಸು ಜನ್ಮಕೆ ಅಹುದೆಂದು
ದ್ವೇಷವು ತೊರೆದು ನೆನಿಸಿದರೆ
ಮೀಸಲಾಗಿಡುವ ವಿಜಯವಿಠ್ಠಲಾ ||5||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.