← ಶ್ರೀಶಿವ

ಪಶುಪತಿಯ ತೋರಮ್ಮಾ

📂 ಶ್ರೀಶಿವ
✍️ ವಿಜಯದಾಸ
🏷️ ಕೀರ್ತನೆಗಳು
ಪಶುಪತಿಯ ತೋರಮ್ಮಾ
ವಶವಾಗಿ ಉದ್ಧರಿಸಮ್ಮಾ
ವಿಷವ ಸವಿದ ರುಂಡಮಾಲನ ತ್ರಿಭುವನ ಪಾಲನ

ಸತಿ ಮೈನಾಕ ನಂದನೆ ಮಾಡುವೆ ನಾನೀಗ ವಂದನೆ
ಮತಿಯ ಕೊಡುತಿಪ್ಪ ಎನ್ನ
ಅಂತರಂಗನ ತ್ರಿಪುರವ ಭಂಗನಾ ಕರುಣಾ ಪಾಂಗನ||1||

ಬುದ್ದ್ಯಾಭಿಮಾನಿ ದೇವಿ
ಇಂದ್ರಾದ್ಯ ಸುರರನ್ನ ಕಾಯ್ವಿ
ಖದ್ಯೋತ ಶಶಿ ಅನಳನೇತ್ರ ಸಾ ಮಂಗಳ
ಗಾತ್ರನ ಧನಪತಿ ಮಿತ್ರನಾ ||2||

ತ್ರಿಜಗ ಪೂಜಿತೆ ಉಮೆ ಪೊಗಳುವೆನು ಒಮ್ಮೆ
ವಿಜಯವಿಠ್ಠಲರೇಯನ ದಾಸದಾಸನ
ಕೈಲಾಸವಾಸನ ಜಗಕೆ ವಿಶೇಷನಾ ||3||
← ಶ್ರೀಶಿವ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.