← ಶ್ರೀಕೃಷ್ಣ
ಪಾಂಡುರಂಗನ ಈಕ್ಷಿಸುವ ಸುಖವೇ ಸಾಕೂ
ಪಾಂಡುರಂಗನ ಈಕ್ಷಿಸುವ ಸುಖವೇ ಸಾಕೂ
ಅಪಾರ ಮಹಿಮ ಅನಂತಾನಂತ ರೂಪನಾ
ಶಶಿ ನಖ ನಾಲ್ಬೆರಳು ಎರಡು ಜಾನು ಜಂಘೀ
ಎಸೆವ ಊರು ಕಟಿ ನಾಭಿ ಉದರ ಉರುತರ ಕಂಠಾ
ಮಿಸಣಿಪ ವದನ ನಾಸ ಕದಪು ಕರ್ಣ ನಯನಾ
ನೊಸಲು ಶಿರ ಜಗವ ವ್ಯಾಪಿಸಿದ ರಕ್ಕಸ ಹರನಾ||1||
ಮಕುಟ ಮಣಿ ಕುಂಡಲ ತಿಲಕ ಸರಿಗೆ ಕೌಸ್ತಭ
ವಿಕಸಿತ ಕಮಲ ತುಲಸಿಹಾರ ಮುತ್ತಿನಸರ ಪ
ದಕ ಅಂಗದ ಕಂಕಣ ಮುದ್ರೆ ಕಟಿಸೂತ್ರ
ಸುಖದಂದಿಗೆ ಪೆಂಡೆಗೆಜ್ಜೆ ಸುಕುಮಾರನಾ ||2||
ಶ್ರುತಿ ತತಿಗೆ ದೂರ ಉನ್ನತ ಲೀಲ ಸಾಕಾರ
ಸತತ ಭಕ್ತರಾಧಾರ ಅಪ್ರಾಕೃತ ಶರೀರ
ಯತಿಗಳ ಮನೋಹರ ಮತಿಗೆ ಅಗೋಚರ
ಪತಿತಪಾವನ ಸಿರಿ ಪತಿ ವಿಜಯವಿಠ್ಠಲನಾ ||3||
ಅಪಾರ ಮಹಿಮ ಅನಂತಾನಂತ ರೂಪನಾ
ಶಶಿ ನಖ ನಾಲ್ಬೆರಳು ಎರಡು ಜಾನು ಜಂಘೀ
ಎಸೆವ ಊರು ಕಟಿ ನಾಭಿ ಉದರ ಉರುತರ ಕಂಠಾ
ಮಿಸಣಿಪ ವದನ ನಾಸ ಕದಪು ಕರ್ಣ ನಯನಾ
ನೊಸಲು ಶಿರ ಜಗವ ವ್ಯಾಪಿಸಿದ ರಕ್ಕಸ ಹರನಾ||1||
ಮಕುಟ ಮಣಿ ಕುಂಡಲ ತಿಲಕ ಸರಿಗೆ ಕೌಸ್ತಭ
ವಿಕಸಿತ ಕಮಲ ತುಲಸಿಹಾರ ಮುತ್ತಿನಸರ ಪ
ದಕ ಅಂಗದ ಕಂಕಣ ಮುದ್ರೆ ಕಟಿಸೂತ್ರ
ಸುಖದಂದಿಗೆ ಪೆಂಡೆಗೆಜ್ಜೆ ಸುಕುಮಾರನಾ ||2||
ಶ್ರುತಿ ತತಿಗೆ ದೂರ ಉನ್ನತ ಲೀಲ ಸಾಕಾರ
ಸತತ ಭಕ್ತರಾಧಾರ ಅಪ್ರಾಕೃತ ಶರೀರ
ಯತಿಗಳ ಮನೋಹರ ಮತಿಗೆ ಅಗೋಚರ
ಪತಿತಪಾವನ ಸಿರಿ ಪತಿ ವಿಜಯವಿಠ್ಠಲನಾ ||3||