← ಶ್ರೀಮಹಾಲಕ್ಷ್ಮಿ

ಪಾಲಿಸೆ ಯೆನ್ನ ಇಂದಿರಾದೇವಿ, ಪಾಲಿಸೆ ಯೆನ್ನಾ

📂 ಶ್ರೀಮಹಾಲಕ್ಷ್ಮಿ
✍️ ವಿಜಯದಾಸ
🏷️ ಕೀರ್ತನೆಗಳು
ಪಾಲಿಸೆ ಯೆನ್ನ ಇಂದಿರಾದೇವಿ, ಪಾಲಿಸೆ ಯೆನ್ನಾ
ಪಾಲಿಸೆ ನಾ ನಿನ್ನ ಪಾಲಿಗೆ ಬಂದಿರ್ಪೆ
ಶ್ರೀಲೋಲನ ಪದಕೀಲಾಲಜ ತೋರಿ

ಚಿತ್ಪ್ರಕೃತಿ ನಿತ್ಯ ಜಡಪ್ರಕೃತ್ಯಭಿಮಾನಿ
ಸತ್ಪ್ರಮಾಣವಾದ ಕೀರ್ತನೆ ನುಡಿಸುತ್ತ||1||

ಮಂತ್ರಗಳರಿಯೆನು ಮಂದಮತಿಯು ಸ್ವ
ತಂತ್ರದವನಲ್ಲ ಸೃಷ್ಟ್ಯಾದ್ಯಷ್ಟ ಕರ್ತೆ||2||

ಗುಣಪ್ರಕ್ರಿಯೆಗಳ ಅರಿತವುಳ್ಳ ಲಕ್ಷಣವಂತೆ
ವಿಜಯವಿಠ್ಠಲನ ನಿಜಾಂಗನೆ ||3||
← ಶ್ರೀಮಹಾಲಕ್ಷ್ಮಿ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.