← ಶ್ರೀಕೃಷ್ಣ

ಪ್ರಥಮ ದೈವವೇ ಪಂಢರಿರೇಯಾ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಪ್ರಥಮ ದೈವವೇ ಪಂಢರಿರೇಯಾ
ಪೃಥ್ವಿಯೊಳಗೆ ಭಾಗೀರಥಿಗೆ ಪಥವ ಕೋರೊ

ಸಕಲಭಯನಾಶ ಸಾತ್ವಿಕ ಮೂರುತಿ
ಭಕ್ತಜನಷೋಷಕ ನೀನಲ್ಲವೆ
ತ್ವಕ್ಕು ಇಂದ್ರಿಯಗಳು ನಿನ್ನಾಧೀನವೋ
ಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ ||1||

ಸರ್ವರಂತರಿಯ ಸಿದ್ಧ ಫಲದಾಯಕ
ಸರ್ವರಲಿ ಸ್ವಾಮಿಯೆಂದೆನಿಪ
ಸರ್ವ ವಿಘ್ನೋಪ ಶಾಂತಾ ವೇದಾಂತನೆ
ಗೀರ್ವಾಣ ಮುನಿಸುತ ಗಿರಿಧರ ದೇವಾ ||2||

ಸಾಧು ಮೂರುತಿ ಸಿದ್ಧ ಫಲದಾ
ಬೋಧ ಕೀರುತಿ ಆದಿಪರಬೊಮ್ಮ
ವಿಜಯವಿಠ್ಠಲರೇಯಾ ನೀನು
ಈ ಜಗದೊಳು ಭೀಮಾ ಕೀರನಿವಾಸಾ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.