← ಪರಬ್ರಹ್ಮ

ನೀನೇ ದಯಾಮಯ

📂 ಪರಬ್ರಹ್ಮ
✍️ ವಚನವೇದ
🏷️ ಕೀರ್ತನೆಗಳು
🎵 ರಾಗ: ಮಿಶ್ರ ಮಧುವಂತೀ
🥁 ತಾಳ: ತ್ರಿತಾಲ
🎧
ಶ್ರವಣ ಮಾಡಿ
ವಿದ್ವಾನ್ ಶ್ರೀ ಗುರುರಾಜ್
ನೀನೇ ದಯಾಮಯ ಇನ್ನಾರಿರುವರು
ನಿನ್ನಂದದ ಹಿತಕಾರಿ |
ನೋವು ನಲಿವಿನಲಿ ಸಮೀಪ ಬಂಧುವು
ಶೋಕ - ತಾಪ - ಭಯಹಾರಿ ||

ಸಂಕಟಪೂರಿತ ಮೋಹಭವಾರ್ಣವ -
ದುತ್ತರಣಕೆ ನೀ ಸಹಕಾರಿ |
ಪ್ರಸನ್ನವಾಗಿಸು ಈ ಬಿರುಗಾಳಿಯ
ರಿಪುದಲ ವಿಪ್ಲವಕಾರಿ ||

ಪಾಪದಹನ ಪರಿತಾಪವನಾರಿಸು
ವರ್ಷಿಸು ಶೀತಲವಾರಿ |
ಎಲ್ಲರು ತ್ಯಜಿಸುವ ಅಂತಿಮಕಾಲದಿ
ನೀನೇ ಆಶ್ರಯಕಾರಿ ||
← ಪರಬ್ರಹ್ಮ ವಚನವೇದ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.