← ಶ್ರೀಕೃಷ್ಣ

ಬಂದರು ಹರಿಯ ವಾಲಗಕೆ ಭಕ್ತ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಬಂದರು ಹರಿಯ ವಾಲಗಕೆ ಭಕ್ತ |
ವೃಂದ ಸಹಿತ ಸುರ ಶ್ರೇಷ್ಠ ಮೊದಲಾದವರು

ನಾಗಜ ನಾಗಾರಿ ಸುತ ಬಂದ |
ನಾಗ ಚರ್ಮಾಂಬರ ನಾಗಾರಿ ಬಂದಾ |
ನಾಗಾನ ಧನು ಬಂದ ನಾಗಪುಂಗವ ಬಂದ |
ನಾಗಾರಿ ಗಮನ ಬಂದ | ನಾಗ ಬಂದಾ || ||1||

ನಾಗಶಯ ಮುಖವಾದ ನಾಗವಾಹನ ಮಿತ್ರ |
ನಾಗ ಚರ್ಮಾಂಬರ ಸಖನು ಬಂದಾ |
ನಾಗಾರಿ ಸುತೆಯಳನಾಳಿದವನು ಬಂದಾ |
ನಾಗ ಭಕ್ಷಕನು ನಾಗಾರಿ ಬಾಂಧವ ಬಂದಾ ||2||

ನಾಗದ್ವೇಷಿಕನು ನಾಗಾನಾದನನುಜ |
ನಾಗಕೇತನನ ಕೊಂದಗ್ರಜನು ಬಂದಾ |
ನಾಗಶಯನ ಸಿರಿ ವಿಜಯವಿಠ್ಠಲರೇಯ |
ನಾಗವಾಹನನಾಗಿ ಬರುವ ಸಂಭ್ರಮದೊಳು ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.