← ಶ್ರೀಕೃಷ್ಣ

ಬಂದು ನಿಂದಾ ಕಣ್ಣ ಮುಂದೆ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಬಂದು ನಿಂದಾ | ಕಣ್ಣ ಮುಂದೆ | ಬಂದು ನಿಂದಾ
ಬಂದು ನಿಂದಾ ಭಾಗವತರ ಪ್ರಿಯಾ |
ಕಂದರ್ಪಜನಕ ಶ್ರೀ ಕರುಣಾಸಾಗರ ಮೂರ್ತಿ

ಕುಟಿಲ ಕುಂತಲ ದೇವ | ವಟು ವೇಷದಿಂದಲಿ ||
ನಟನೆ ಮಾಡುತ ದಿವ್ಯ | ಪಟುತರದಲಿ ತಾನು ||1||

ಮುರಳಿನೂದುತ್ತ | ಮರುಳುಗೊಳಿಸಿ ಜನರ ||
ಕೊರಳ ಪದಕಹಾರ | ಧರಿಸಿ ತಾ ನಲಿಯುತ ||2||

ಸುಜನರ ಪೊರೆಯುವ | ಕುಜನರ ತರಿಯುವ |
ವಿಜಯ ಸಾರಥಿ ದಿವ್ಯ | ವಿಜಯವಿಠಲರೇಯಾ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.