← ಶ್ರೀಕೃಷ್ಣ

ಬಂದೆ ನಾ ನಿಂದೆ ಇಂದೇ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಬಂದೆ ನಾ ನಿಂದೆ ಇಂದೇ | ವಂದಿಸಿದೆನೊ ವಂದೆ |
ಬಿಂದು ಮಾಧವ ತಂದೆ | ಆನಂದ ಇಂದಿರೇಶ ಬಂದೆ

ಪುರುಹೂತ ಜಾತ ಸೂತ | ಸರಸಿಜ ತಾತಾ |
ಪರಮ ಪುರುಷ ಖ್ಯಾತ | ಸರವಂದ್ಯ ದೈತ್ಯ ಘಾತಾ | ಹಾಹಾ
ಚರಣವ ನಿರುತರ ನೆರೆನಂಬಿದೆ | ದು
ಸ್ತರ ಭವಶರಧಿ ಉತ್ತರಿಸೊ ಉರಗಶಾಯಿ ||1||

ಕರಿ ಪಾಶ ನಾಶ ಈಶಾ | ವರ ಮೂರ್ತಿ ವರದೇಶಾ
ಶರಣರ ಪರಿತೋಷಾ | ತರತಮ್ಯ e್ಞÁನ ಕೋಶ | ಹಹ |
ಪುರಹರಗೀಕಾಶಿಪುರ ಕರುಣಿಸಿದ ಸುಂ |
ದರಗಾತುರ ಗೋತುರ ಧರ ಧರಣೀಶಾ ||2||

ಅವಿಮುಕ್ತಿ ಕ್ಷೇತ್ರವಾಸಾ | ನವನವ ಗುಣಭೂಷಾ |
ಅವಿಕಾರ ನಾನಾ ವೇಷಾ |
ರವಿಜವನ ಪೊರೆವ ಮಿರುವ ಮಹಸತ್ಕಥಾ
ಶ್ರವಣವೆ ಕೊಡು ಕೇಶವ ವಿಜಯವಿಠ್ಠಲಾ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.