← ಶ್ರೀಕೃಷ್ಣ

ಬಲ್ಲವಾಗಿಲ್ಲೆ ಪರಮಾತ್ಮಾ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಬಲ್ಲವಾಗಿಲ್ಲೆ ಪರಮಾತ್ಮಾ
ಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ ಇರುತಿಪ್ಪ

ನೋಡಿದವೆಲ್ಲ ಶ್ರೀಹರಿಯ ಪ್ರತಿಮೆಗಳೆಂದು
ಆಡಿದವೆಲ್ಲ ಹರಿಯ ರೂಪವೆಂದು
ಮಾಡಿದದ್ದೆಲ್ಲ ಶ್ರೀಹರಿಯ ಸೇವೆ ಎಂದು
ಕೂಡಿದದ್ದೆಲ್ಲ ಹರಿ ಭಕ್ತರೆಂದು ||1||

ತಾಪತ್ರಯಗಳೆಲ್ಲ ಮಹಾ ತಪಸು ಎಂದು
ರೂಪಗಳೆಲ್ಲ ಹರಿಕಾಂತಿ ಎಂದು
ಪೋಪದು ಬರುವುದೆಲ್ಲ
ವ್ಯಾಪಾರ ಹರಿ ಅಧೀನವೆಂದು ||2||

ತಾರತಮ್ಯಕಿದು ಪರಲೋಕದಿ ಸರಿಯಿಲ್ಲ
ಸಿರಿ ಹರಿಯದೊರೆ ತನಗೆ ಎಂದೆನುತಾ
ಇರುಳು ಹಗಲು ಏಕ ಭಕ್ತಿಯಿಂದಲಿ ನಿತ್ಯ ಕಾಲಕಾಲಕೆ
ಹರಿಯ ವ್ಯಾಪಾರ ಸ್ಮರಿಸುತ್ತ ಓಡ್ಯಾಡುತ ||3||

ಒಲಿಸಿ ಒಲಿಸಿ ಒಲಿದು ಒಲಿದು
ಖಳರೊಳಗಾಡದಲೆ ವಿಜಯವಿಠ್ಠಲ ವೆಂಕಟ
ಶೈಲ ನಿವಾಸಾ ಸರ್ವೋತ್ತಮನೆ ಗತಿ ಎಂದು ||5||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.