← ಶ್ರೀಕೃಷ್ಣ

ಬಾರೊ ಭಕ್ತರ ಮನಮಂದಿರಕೆ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಬಾರೊ ಭಕ್ತರ ಮನಮಂದಿರಕೆ |
ಶ್ರೀ ರಮಣ ಪ್ರಯಾಗವೇಣಿ ಮಾಧವರಾಯಾ

ಅಂಬುಧಿ ಚರನೆ ಬಾರೊ |
ಅಂಬುಧಿ ಮಥನ ಬಾರೊ |
ಅಂಬುಜಾಕ್ಷಿಯ ತಂದ ರ |
ಕ್ತಾಂಬು ಪಾನನೆ ಬಾರೊ | ||1||

ಅಂಬುಪೆತ್ತವನೆ ಬಾರೊ |
ಅಂಬುಧಿ ತೊಲೆಗಿನ |
ಅಂಬುಧಿ ಬಂಧನ ಬಾರೊ |
ಅಂಬೆ ಕಾಯ್ದವನೆ ಬಾರೊ ||2||

ಅಂಬಾರ ಪುರಾಲಯ ನ |
ರಾಂಬು ಹಯಗಮನ ಪೀ
ತಾಂಬರ ವಿಜಯವಿಠ್ಠಲ |
ಎಂಬ ವೆಂಕಟರಾಯ ಬಾರೊ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.