← ಶ್ರೀಕೃಷ್ಣ

ಬೇಡುವರೊ ಸುಖ ಬೇಡರೊ ದುಃಖವ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಬೇಡುವರೊ ಸುಖ ಬೇಡರೊ ದುಃಖವ
ಮಾಡಾರೋ ಅವರ ಉಪಾಯವ ಜನ ಬೇಡುವರೋ

ಇಟ್ಟಿಕಲ್ಲನು ತಂದು ಕಿಟ್ಟಿ ಬೀಸುವರೊ
ಕುಟ್ಯಾರೋ ರಂಗವಲ್ಲಿಯಾ ಜನ ||1||


ಸಾಲು ಸಾಲೆಮ್ಮೆಯ ಸೋಲದೆ ತೊಳೆವರು
ಸಾಲಿಗ್ರಾಮಕ್ಕ ಹಾಲೆರೆಯರೊ ಜನ ||2||

ತ್ರಿಜಗವಂದಿತ ನಮ್ಮ ವಿಜಯವಿಠ್ಠಲನ
ಭಜನೆಯಾ ಮಾಡದೆ ಸೋಲ್ವರೋ ಜನ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.