← ಶ್ರೀಕೃಷ್ಣ

ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ
ಮಾಡು ಕರುಣವ ಫಲದಾಯ

ಯತಿರತುನತಿ ದಶಮತಿ ಮತದಲಿ ಸ
ನ್ನತಿ ಹಿತ ಭಕುತಿಲಿ ಪ್ರತಿದಿನ ಸ
ದ್ಗತಿ ಪಥ ಚತುರತೆ ತತುವೇಷ ತತಿಸಮ್ಮತ
ಹಿತವಾಗಿಪ್ಪ ಸುಖಮತಿಯನೀಯೋ ||1||

ಬಲಬಲ ಬಲರಿಪು ವೊಲಿದೊಲಿದು ಗಿರಿಯಲಿ
ಬಲುವೊಲಿಮೆಲಿ ವೊಲಿಸಬಾರದೇ
ಕಳವಳಿಸಲು ಬಲಗುಂದಿ ನಲವು ನಿ
ಶ್ಚಲವಾಗಿ ಬಲವಾಗಿ ಗಿರಿಯೆಳದೆಲೊ ಸಲಹಿದಿ ||2||

ತ್ರಿಜಗವೀರ ಧ್ವಜ ಸುಜನರ ನಿಜಪದ
ರಜರಜವಾದರು ಭಜಿಸುವ ಸರ್ವದ
ವ್ರಜಗಳ ಸಂಗ ದ್ವಿಜನರವಿ ಈ ಮತದಿ
ಸೃಜಿಸುವದು ಸಿರಿ ವಿಜಯವಿಠ್ಠಲರೇಯಾ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.