← ಶ್ರೀಕೃಷ್ಣ

ಭಕುತಿಯ ಪಾಲಿಸು ಜೀಯಾ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಭಕುತಿಯ ಪಾಲಿಸು ಜೀಯಾ ಮುಂದೆ
ಮುಕುತಿಗೊಡವೆ ಯಾಕೆ ನೀನೊಲಿದ ಮೇಲೆ

ತನುವೆ ನಿನ್ನಾಧೀನವೆನಿಸು ಇದು
ಅನುದಿನ ಕೊಡು ಏಕಪ್ರಕಾರ ಮನಸು
ಧನ ವಡವೆಯ ಕಂಡ ಕನಸು ಎಂದು
ಎನಗೆ ತೋರಲಿ ನಿತ್ಯ ನಿನ್ನಂಘ್ರಿ ನೆನಸು ||1||

ತತ್ವದ ಮತದೊಳಗಿರುಸು ಪುಶಿ
ಉತ್ತರ ಮತವೆಂಬ ಮಾರ್ಗವ ಮೆರೆಸು
ಉತ್ತಮರೊಳಗೆನ್ನನಿರಿಸು ಭವ
ವತ್ತುವ ನಿನ್ನ ನಾಮಮೃತ ಸುರಿಸು ||2||

ಶ್ರವಣ ಮನನ ಧ್ಯಾನವೀಯೋ ಎನ್ನ
ಅವಗುಣವೆಣಿಸದೆ ಕರುಣಾಳು ಕಾಯೊ
ಅವಸಾನದಲಿ ನೀನೆ ಗತಿಯೊ ತ್ರೈ
ಭುವನೇಶ ವಿಜಯವಿಠ್ಠಲ ನೀ ದೊರೆಯೋ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.