← ಶ್ರೀಕೃಷ್ಣ

ಭಾರತೀ ಭವಹಾರಿಯೆ ಭಕ್ತರಪ್ರಿಯೆ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಭಾರತೀ ಭವಹಾರಿಯೆ | ಭಕ್ತರಪ್ರಿಯೆ |
ಭಾರತೀ ಭವಹಾರಿಯೇ
ಈರೈದು ಇಂದ್ರಿಯಗಳುಗಾರು |
ಮಾಡದಂತೆ ಸಾಕಾರವಾಗಿ ಪಾಲಿಸು

ಮತಿವಂತನ ಮಾಳ್ಪುದು | ಇದಕೆ ನಿನ್ನ |
ಪತಿಯ ಈಗಲೆ ಕೇಳ್ವುದು |
ಕ್ಷಿತಿಯೊಳು ಹೀನರ ಸ್ತುತಿಸಲರಿಯೆ | ಮು-
ಕುತಿ ಮಾರ್ಗವ ತೋರಿ ಭಕುತಿ ಬೇಗ ಒದಗಿಸು ||1||

ಮಹತ್ತತ್ವದಭಿಮಾನಿ ನೀ | ಕಲಿರಹಿತೆ |
ಅಹಿಪತಿ ಅಪ್ಪ ಖಗಪ ಜನನೀ ||
ಮಹಾಪ್ರಮಾಣು ವ್ಯಾಪುತೆ ಸರ್ವಜೀವರ |
ದೇಹದಲಿ ನಿಂದು ಶ್ರೀಹರಿ ಆರಾಧನೆಯ ರಹಸ್ಯವ ||2||

ಶರಣು ಶರಣು ಗುಣಮಣಿ | ಚಂದ್ರಪ್ರಕಾಶೆ |
ಪರಮ ಪಾವನಿ ಕಲ್ಯಾಣಿ ತರತಮ್ಯ ಭಾವದಿ ||
ಅರಿದು ಕೊಂಡಾಡುವ ಚಿಂತೆ ಇರಲಿ | ವಿ- |
ಸ್ಮರಣೆಯಾಗದಂತೆ ವಿಜಯವಿಠ್ಠಲನ್ನ ನಿರುತ ಪೊಂದಿಸು ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.