← ಶ್ರೀಕೃಷ್ಣ

ಭೇದ ಪೇಳುವೆನೆ ತಮೊ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಭೇದ ಪೇಳುವೆನೆ ತಮೊ ಯೋಗ್ಯ ಪೂರ್ಣ
ಬೊಧರ ಮತ ಬಿಡುವನೆ ಮುಕ್ತಿಯೋಗ್ಯ

ಸತ್ಯ ನುಡಿವನೆ ಅಪಕಾರಿ ಪರರ
ವಿತ್ತಪಹರಿಸುವನೆ ಬಲು ಉದಾರಿ
ಹತ್ಯ ಮಾಡುವನೆ ಉಪಕಾರಿ
ನಿತ್ಯ ಚಿತ್ತ ಚಂಚಲಿಸುವನೆ ಧರ್ಮದಾದಿ ||1||

ಪರನಾರಿ ಸಹೋದರ ಹೀನ ಕಂಡಾ ಉ
ತ್ತರಗಳನಾಡುವನೆ ಆವಾಗ ಮೌನ
ತರತಮ್ಮ ಪೇಳುವನೆ ಕೋಣ ತನ್ನ
ಹರಣವೊಪ್ಪಿಸಿಕೊಂಬುವನೆ ಪ್ರವೀಣಾ ||2||

ಭ್ರಷ್ಟನೆನೆಸುವನೆ ಧನ್ಯ ಪರರ
ಇಷ್ಟಾರ್ಥ ಕೆಡಿಸುವನೆ ಬಲು ಮಾನ್ಯ
ಕಷ್ಟ ಬೇಡುವನೆ ರಾಜನ್ಯ ವಿಜಯ
ವಿಠ್ಠಲನ್ನ ಪೂಜೆ ಮಾಡುವನೆ ಗುಣಶೂನ್ಯ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.