← ಶ್ರೀಮಧ್ವಾಚಾರ್ಯ

ಮಂಗಳಂ ಪ್ರಧಾನ ಮಾರುತಗೆ

📂 ಶ್ರೀಮಧ್ವಾಚಾರ್ಯ
✍️ ವಿಜಯದಾಸ
🏷️ ಕೀರ್ತನೆಗಳು
ಮಂಗಳಂ ಪ್ರಧಾನ ಮಾರುತಗೆ
ಮಂಗಳಂ ಪಾವನ ಮೂರುತಿಗೆ |
ಮಂಗಳಂ ತ್ರಿವಿಧ ಸತ್ಕೀರ್ತಿಗೆ |
ಮಂಗಳಂ ಸದ್ಗುಣ ಕೀರ್ತಿಗೆ

ಮುಕ್ಕೋಟಿ ರೂಪನಿಗೆ ರುಗ್ಮಮಣಿ ಹಾರನಿಗೆ |
ಚಿಕ್ಕವನಾಗಿ ಪುರಪೊಕ್ಕವಗೆ ||
ಸಿಕ್ಕಿ ವೈರಿಯ ಕೈಗೆ ರಕ್ಕಸರ ಎದೆಯಲ್ಲಿ |
ನಿಕ್ಕಿಸಿದರಣದ ವಿಷ ಭೋಕ್ತನಿಗೆ ||1||

ವೃಕೋದರ ಭೀಮಗೆ ವಿಶೋಕನೊಡೆಯಗೆ |
ಬಕ ಜರಾಸಂಧ ಕೀಚಕ ವಧೆ ಮಾಡಿದಗೆ ||
ಸಕಲ ದಳದೊಳಗೆ ನಾಯಕನೇ | ನೀ |
ನೇ ಕಲಿಬಂಧಕ ಶಕುತಿಗೆದ್ದ ತಾರಕ ಚರಿತಗೆ ||2||

ಒಂದೆ ಅಕ್ಷರದಿಂದ ನಂದ ಕೊಡುವವನಿಗೆ
ಒಂದೆರಡು ಮೂರಾರು ಮುರಿದವಗೆ ||
ಒಂದೆ ದೈವ ನಮ್ಮ ವಿಜಯವಿಠ್ಠಲ ಕೃಷ್ಣನ್ನ |
ವಂದಿಸುವ ಶ್ರೀಮದಾನಂದತೀರ್ಥಗೆ ||3||
← ಶ್ರೀಮಧ್ವಾಚಾರ್ಯ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.