← ಶ್ರೀಗುರು ರಾಘವೇಂದ್ರ

ಮಂತ್ರಾಲಯನಿವಾಸ ಉತ್ತಮ ಹಂಸ

📂 ಶ್ರೀಗುರು ರಾಘವೇಂದ್ರ
✍️ ವಿಜಯದಾಸ
🏷️ ಕೀರ್ತನೆಗಳು
ಮಂತ್ರಾಲಯನಿವಾಸ ಉತ್ತಮ ಹಂಸ |
ಸಂತಾಪ ಪರಿಹರಿಸ ಕೊಡು ಎನಗೆ ಲೇಸ

ಯತಿಗಳ ಶಿರೋರನ್ನ ಯೋಗಸಂಪನ್ನ |
ಕ್ಷಿತಿಯೊಳಗೆ ನಿನಗೆ ಸರಿಗಾಣೆನೊ ||
ನುತಿಸುವೆ ಭಕ್ತಿಯಲಿ ಬಿಡದೆ |
ಮುಕುತಿಯಲಿ ಸತತಾನಂದದಲಿಪ್ಪ ||1||

ಕಪಿಲ ತೀರ್ಥದಲಿ ಶರಣ ಶುದ್ಧಿಯಲ್ಲಿ |
ತಪವ ಮಾಡುವ ಜ್ಞಾನಿ ಸೌಮ್ಯಜ್ಞಾನಿ ||
ಜಪಶೀಲ ಗುಣ ಗಣಾಂಬುಧಿ ಪುಣ್ಯದ ಬುದ್ಧಿ
ಕೃಪೆಮಾಡಿ ಕೊಡು ಗುರುವೆ ಶಿಷ್ಯಸುರತರುವೆ ||2||
ತಮೋಗುಣ ಕಾರ್ಯ ಪೋಗಲಾಡು ವ್ಯಾಪ್ತಿಯಾ |
ಶಮೆದಮೆಯಲ್ಲಿ ಉಳ್ಳ ಮಹಿಮೆಯಾ ||
ನಮಗೆ ಪೇಳುವೆ ವೇದಬಲ್ಲ ವಿನೋದ |
ಸುಮನ ಸುಗುಣವ ಮೆಚ್ಚೆ ದುರ್ಮತಕೆ ಕಿಚ್ಚೆ ||3||

ಕಾಶಿ ಸೇತುವೆ ಮಧ್ಯೆ ಮೆರೆವೇ ಜನರಲ್ಲಿ |
ಭೇದ ವಿದ್ಯಾ ಸಜ್ಜನಕೆ ತಿಳಿಸು ಮನಸು ನಿಲ್ಲಿಪೆ ||
ಪೋಷಿಸುವೆ ಅವರ ಅಟ್ಟುವ ಮಹದುರ |
ದೋಷವ ಕಳೆವಂಥ ವಿಮಲ ಶಾಂತ4
ವರಹಜ ತೀರದಲ್ಲಿದ್ದ ಸುಪ್ರಸಿದ್ದ |
ಮರುತ ಮತಾಂಬುಧಿ ಸೋಮ ನಿಸ್ಸೀಮ ||
ನರಸಿಜಾಪತಿ ನಮ್ಮ ವಿಜಯವಿಠ್ಠಲನಂಘ್ರಿ |
ಸ್ಮರಿಸುವ ಸುಧೀಂದ್ರ ಸುತ ರಾಘವೇಂದ್ರ ||5||
← ಶ್ರೀಗುರು ರಾಘವೇಂದ್ರ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.