← ಶ್ರೀಕೃಷ್ಣ

ಮಂದಮತಿ ನಾನಯ್ಯ ಮಂಗಳಾಂಗಾ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಮಂದಮತಿ ನಾನಯ್ಯ ಮಂಗಳಾಂಗಾ
ಒಂದಾದರೂ ಗತಿ ಧರ್ಮ ಚಿಂತಿಸಲಿಲ್ಲಾ

ಜಪತಪಗಳರಿಯೆ ಉಪವಾಸಗಳರಿಯೆ
ಕೃಪೆ ಮಾಡಲರಿಯೇ ಪರಿಜನಗಳಲ್ಲಿ
ಕುಪಿತವನು ಬಿಡಲರಿಯೆ ಅಪರಿಮಿತವಾಗಿದ್ದ
ಅಪರಾಧಗಳ ಮಾಡಿ ತಪಿಸುವೆನು ಭವದೊಳಗೆ ||1||

ಯಾತ್ರೆ ಮಾಡಲರಿಯೆ ತೀರ್ಥ ಮೀಯಲರಿಯೆ
ಗಾತ್ರದಂಡಣಿಯ ಮಾಡಲರಿಯೆ
ಸ್ತೋತ್ರ ಪಠಿಸಲರಿಯೆ ಗಾತ್ರ ಲಘು ನೋಡಿ ಸ
ತ್ಪಾತ್ರರನು ಭಜಿಸದೆ ವ್ಯರ್ಥ ಕಾಲವ ಕಳೆವ||2||

ಅನ್ನದಾನವರಿಯೆ ಮನ್ನಣೆ ಮಾಡಲರಿಯೆ
ಚನ್ನಾಗಿ ಬಂಧುಗಳು ಪೊರಿಯಲರಿಯೆ
ಎನ್ನ ಮನದೊಡಿಯ ಶ್ರೀ ವಿಜಯವಿಠ್ಠಲರೇಯಾ
ನಿನ್ನ ಭಕುತಿ ಒಮ್ಮೆ ಪಡಿಯಲರಿಯೆ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.