← ಶ್ರೀನದಿ

ಯಮುನೆ ದುರಿತ ಉಪಶಮನೆ

📂 ಶ್ರೀನದಿ
✍️ ವಿಜಯದಾಸ
🏷️ ಕೀರ್ತನೆಗಳು
ಯಮುನೆ ದುರಿತ ಉಪಶಮನೆ |
ಅಮಮ ಮಂದಗಮನೆ ||
ಅಗಣಿತ ಸುಮನೆ

ಆ ಮಹಾ ಮಾರ್ತಾಂಡ ಪುತ್ರೆ ಮಂಗಳಗಾತ್ರೆ |
ಕಾಮಿತ ಸುಫಲದಾಯೆ ಕಾಲನಿಭ ಕಾಯೆ |
ಆ ಮಂಜುಗಿರಿ ಬಳಿಯ ಅಲ್ಲಿ ಪುಟ್ಟಿದ ಸಿರಿಯೆ |
ಸೋಮಕುಲಪಾವನೇ ಶರಣ ಸಂಜೀವನೆ ||1||

ಗಂಗಾ ಸಂಗಮ ಘನತರಂಗಿಣೀ ಮಹಾಮಹಿಮೆ |
ಅಂಗವಟೆ ಅತಿ ಚಲುವೆ ನಲಿದಾಡಿ ನಲಿವೆ |
ಮುಂಗುರಳು ಸುಮಲತೆ ಮೂಲೋಕ ವಿಖ್ಯಾತೆ |
ಕಂಗಳಲಿ ನೋಳ್ಪಂಗೆ ಹೃತ್ಕಮಲ ಭೃಂಗೆ ||2||

ವಾರಿನಿಧಿ ಪ್ರಥುಕುಗಾಮಿನಿ |
ಹಾರ ಮುಖೆ ಸುಪ್ರಮುಖೆ |
ವೀರಶಕ್ತಿ ವಿಜಯವಿಠ್ಠಲನ |
ಕಾರುಣ್ಯಪಾತ್ರೆ ಸಂಗೀತಲೋಲೆ ||3||
← ಶ್ರೀನದಿ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.