← ಶ್ರೀಹನುಮಂತ

ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ

📂 ಶ್ರೀಹನುಮಂತ
✍️ ವಿಜಯದಾಸ
🏷️ ಕೀರ್ತನೆಗಳು
ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ |
ಮೋಕ್ಷದಾಯಕ ಯಂತ್ರೋದ್ಧಾರಕ ಹನುಮಂತಾ

ಗತಿಯ ಕಾಣೆನೊ ಸದಾ ಗತಿಯೊ ಎನ್ನ ಮನಸು |
ಸತತ ಚಂಚಲ ದೂರ ಸ್ಥಿತಿಗೆ ಎರಗಿದೆ ಸು |
ಕೃತವೆಲ್ಲ ಪೋಗಾಡಿದೆ ಇದಕೆ ಪ್ರಾಯಶ್ಚಿತ್ತ
ನಿನ್ನ ನಾಮವ ಬೇಡಿದೆ | ಹಾಡಿ ಪಾಡಿದೇ |
ಪ್ರತಿದಿನ ದಯ ಮಾಡಿದೆ ವರವನ ಬೇಡಿದೆ |
ಅತಿಶಯದಿಂದಲಿ ವಿಪ್ರಜಿತು ವಿರೋಧಿಯ ವಿಪ್ರ||1||

ನಾನಾ ಮಹಿಮ ಮಾನ ಪಾವನ ವಿದ್ಯಾ ಪ್ರ |
ವೀಣಾರೋಚನಾ ವಿe್ಞÁನಾಭಿಮಾನಿ ನಿ |
ದಾನ ತ್ರಿಜಗದ್ಗುರುವೆ ಸುರತರುವೇ |
ನಾನೆ ನಿನಗೆ ಕರವ ಮುಗಿದು ಕರವೇ |
ಧ್ಯಾನದಿಂದಲಿ ಬೆರವೆ ಸುತ್ಯನ್ಯರವೇ |
ಜನನವ ಬಿಡಿಸೋದು ಗಾನವ ನುಡಿಸೋದು ||2||

ವ್ಯಾಸಮುನಿ ವರದಾ ವಸುಧಿಯೊಳಗೆ ಮೆರೆದಾ |
ಭಾಷಿಸುವ ಮಾತಂಗ ಪರ್ವತದಲಿ ತುಂಗಾ |
ವಾಸಾ ವಾಸವ ವಿನುತ ಸತ್ವಕಾಯಾ |
ಶಾಶ್ವತಾಗಮ ವಿಖ್ಯಾತಾ ನಿತ್ಯ ಜಪಿತಾ |
ಲೇಸು ಸುದರುಶನ ತೀರ್ಥ ತೀರದಲ್ಲಿಪ್ಪಾ |
ಶ್ರೀಶ ವಿಜಯವಿಠ್ಠಲನ ದಾಸನ ಮಾಡಿ ಮುನ್ನಾ ||3||
← ಶ್ರೀಹನುಮಂತ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.