← ಶ್ರೀಗುರು ರಾಘವೇಂದ್ರ

ರಾಜವದನೆ ನೀ ಗುರು ರಾಜರಿರುವ

📂 ಶ್ರೀಗುರು ರಾಘವೇಂದ್ರ
✍️ ವಿಜಯದಾಸ
🏷️ ಕೀರ್ತನೆಗಳು
ರಾಜವದನೆ ನೀ ಗುರು-
ರಾಜರಿರುವ ಸಂಭ್ರಮ ನೋಡೆ
ರಾಜಿಸುವ ಮುಖನ
ಪೂಜಿಸುವ ಯತಿವರನೆ

ದೂಷಿತ ದುರ್ಜನರ
ತಾಸು ಬಾಳದಂತೆ ವಿ-
ಶೇಷದಿಂದ ಭಜಿಸುವರ
ಪೋಷಿಸುವ ಯತಿವರನೆ ||1||

ಪಾದ ನಂಬಿದವರಿಗೆ
ಮೋದವೀವ ದೇವನೆ
ಬೀದಿಬಿಡುವ ನಂಬಿದವರ
ವಾದಿರಾಜ ದೊರೆವರನೆ ||2||

ಅಜಪದಕೆ ಅರ್ಹನೆಂದು
ಗಜವರದನ ದಾಸನೆಂದು
ಭಜನೆ ಮಾಡುವ ನಿಜವ ಪೇಳುವ
ವಿಜಯವಿಠಲನ ಸೇವಕರಿವರೇ ||3||
← ಶ್ರೀಗುರು ರಾಘವೇಂದ್ರ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.