← ಶ್ರೀಕೃಷ್ಣ

ವಿಠ್ಠಲನ ಪದವನಜ ತುಂಬೆ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ವಿಠ್ಠಲನ ಪದವನಜ ತುಂಬೆ
ಸೃಷ್ಟಿಯೊಳಗೆ ಎನ್ನ ಬಿಡದೆ ಪೊರೆ ಎಂಬೆ

e್ಞÁನ ಭಕುತಿ ವೈರಾಗ್ಯದಲಿ ಜಾಣ
ದಾನ ಮಾಡುವರೊಳಗೆ ಪೂತುರೆ ನೀನೆ ನಿಪುಣ
ಮಾನಸದಲಿ ಹರಿಯ ಧ್ಯಾನ ಮಾಡುವ
ಆನಂದಮತಿ ವಿಮಲ ಸರ್ವವಿಧಾನ ||1||

ಮಾತುಮಾತಿಗೆ ನೆನೆಸಿದವರ ಭವದ ಮಾಯಾ
ಸೇತುವಿಯ ಕಡಿದು ಸಂತತವಾಗಿ ಸಹಾಯಾ
ಪ್ರೀತಿಯಲಿ ಬಂದು ಶ್ರೀ ಹರಿಯ ಪದ ಸೇವಿಯಾ
ತಾ ತೋರಿ ತಿಳಿಸುವಾ ಪ್ರಿಯನೆನಿಸುವಾ
ಭೂತಳದೊಳು ಗುರು ಪುರಂದರ ರಾಯಾ ||2||

ಪಾವನ ಶರೀರ ಎನಗೆ ವಜ್ರ ಪಂಜರಾ
ಕೂವಾದಿ ಮತಹರ ನಂಬಿದವರಾಧಾರ
ಪಾವಮಾನಿಯ ಮತದಲಿಪ್ಪ ಮನೋಹರ
ಶ್ರೀ ವಿಜಯನಗರ ಮಂದಿರದೊಳಗುಳ್ಳ
ಶ್ರೀ ವಿಜಯವಿಠಲನ್ನ ಪೂಜಿಸುವ ಧೀರ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.