← ಶ್ರೀಕೃಷ್ಣ

ವೆಂಕಟಾಚಲ ಪಂಕಜ ಪತಿ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ವೆಂಕಟಾಚಲ ಪಂಕಜ ಪತಿ |
ಪಂಕಜ ಸಖ ಸಂಕಾಶಾನೇಕಾ |
ಸಂಕಟಳಿದು ನಿಃಶಂಕನ ಮಾಡೊ |
ಅಂಕೆಯವನೆಂದು ||

ಬಂದೆ ಎದುರಿಲಿ ನಿಂದೆ ಸಿರಬಾಗಿ |
ಒಂದೆ ವಂದನೆಯೆಂದೆ ಲೋಕದ ತಂದೆ ಮನಸಿಗೆ |
ತಂದೆ ನಿನಗ ಇಂದೆ ಅಂದದನು |
ಹಿಂದೆ ಯೆಸಗಿದ ದ್ವಂದ್ವ ಪಾಪಕೆ ಒಂದೆ ನಿನ್ನಂಘ್ರಿ |
ಸಂದೇ ನಾರದೆ ಮುಂದೆ ಬಾರದೆ
ಎಂದೆಗೆಂದಿಗೆ ಮುಂದೆ ಜನನಗಳು ||1||

ನೋಡು ಎನ್ನ ಕೂಡಾಡು ದಯವನ್ನು |
ಮಾಡು ಮುದದಿಂದಲಾಡು ಮಾತನು
ನೀಡು ಕರುಣವ |
ಜೋಡು ತೊಡುವೆನು ಮೂಢನೆಂದೆನದೆ
ಹೋಡುಗಾರರು ಬೀಡಿನೊಳಗಿದ್ದು |
ಕಾಡುವದು ನಾನಾಡಲೇನು |
ಈಡು ನಿನಗೆಲ್ಲಿ ನಾಡೊಳು ಕಾಣೆ ಮೂಡಲಾದ್ರಿ ನಿಲಯಾ ||2||

ಸಾರಿದೆನೊ ಮನಸಾರ ನಿನ್ನಂಘ್ರಿ ಸಾರಾ|
ಸಾರವೆಂಬದಾಸಾರವನು ನೂಕಿ |
ಸಾರ ಹೃದಯರ ಸಾಲೆಲಿರಸೆನ್ನ |
ಸಾರೆಗರೆಯೊ ಕಂಸಾರಿ ಪ್ರತಿದಿನ
ಸಾರಥಿಯಾಗೊ ಸಾರಿಸಾರಿಗೆ
ಸಾರಬೋಕ್ತಾ ವಿಜಯವಿಠ್ಠಲ ಕೆಲಸಾರದೆ ಸಾರಲಿರೊ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.