← ಶ್ರೀಕೃಷ್ಣ

ಶರಣು ಗಿರಿಯ ತಿಮ್ಮಾ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಶರಣು ಗಿರಿಯ ತಿಮ್ಮಾ | ಶರಣು ಪುರುಷೋತ್ತಮಾ |
ಶರಣು ಮಹಾ ಮಹಿಮ | ಶರಣು ಪರಬೊಮ್ಮಾ |
ಪರಿಹರಿಸುವದು ಹಮ್ಮಾ

ಸ್ಮರ ಕೋಟಿ ಲಾವಣ್ಯ | ನಿರುತ ದೇವ ವರೇಣ್ಯ |
ಕರಿರಾಜನ ಭಂಗ | ಹರಿಸಿದ ಶಿರಿ ರಂಗ |
ಸುರವಿನುತ ವಿಹಂಗ | ತುರಗ ತುರಗ ವದನ |
ಪರಮ ವಾರಿಜ ಸದನ | ಕರ ಮುಗಿವೆನೈಯಾ |
ಕರದ ಮಾತಿಗೆ ಜೀಯಾ | ಭರದಿಂದ ಕೊಡು ಮತಿಯಾ ||1||

ಆದಿ ಮೂಲನೆ ನೀನು ಸಾಧುಗಳ ಸುರಧೇನು |
ಪಾದದಲಿ ಪೆಣ್ಣಾ |
ಮೋದದಲಿ ಪೆತ್ತ ಚಿಣ್ಣಾ | ನಾದ ಬಲು ಪಾವನ್ನಾ |
ಭೇದಾರ್ಥ e್ಞÁನ | ಆದರಿಸೆ ಅನುದಿನಾ |
ನೀ ದಯದಲಿ ಕೊಡು | ಈ ದೇಹ ನಿನ್ನ ಬೀಡು |
ಯಾದುದೆ ಇತ್ತ ನೋಡು ||2||

ಜಲದೊಳಗಾಡಿದೆ | ಚಲಕೆ ಬೆನ್ನ ನೀಡಿದೆ |
ನೆಲ ಬಂದು ನೆಗಹಿದೆ | ಖಳನನ್ನ ಕೆಡಹಿದೆ |
ಇಳಿಯ ಮೂರಡಿ ಮಾಡಿದೆ | ಕುಲವ ಕೂಡಲಲಿ ಹಾರ |
ತಲೆ ಜಡೆ ಜಾರ ಚೋರ | ಅಳಿದೆ ಮುಪ್ಪುರು ಶೂರಾ |
ವಿಜಯವಿಠ್ಠಲ ಪಾರಾ | ಫಲವೀವೆ ಧರಣೀಧರಾ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.