← ಶ್ರೀಗುರು

ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ

📂 ಶ್ರೀಗುರು
✍️ ವಿಜಯದಾಸ
🏷️ ಕೀರ್ತನೆಗಳು
ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ |
ಅಭಿವಂದಿಸುವೆನೊ ಜೀಯ್ಯಾ

ನಿರುತ ಅಂತರದೊಳು ಹರಿಗೆ ಸಮ್ಮೊಗನಾಗಿ
ಕರವ ಜೋಡಿಸಿ ಬಿನ್ನೈಪಾ ||
ಗುರುವೆ ಎನ್ನಯ ಮಾತು ಕೇಳೊ ದುರಿತ ರಾಶಿ |
ಪರಿಹಾರ ಮಾಡಿಸಯ್ಯಾ ||1||

ಮಾರುತಿ ಸದಾಗತಿ ಭಾರತೀಪತಿ ಯತಿ |
ಮಾರಾರಾತಿಗೆ ನೀ ಗತಿ ||
ಮಾರುತ್ತರ ಕಾಣೆ ಮಾರುತಿ
ಮಾರಿಗಳಿಗೆ ನಿರುತ ಮಾರಕ ನೀನಹುದೋ||2||

ವಾಯು ಎನಗೆ ಸಂಪೂರ್ಣಾಯು ಪಾಲಿಸೊ ಸರ್ವ |
ಸಾಯುಜ್ಯ ಸಾರೂಪ್ಯನೆ ||
ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ |
ಈ ಯುಗದೊಳು ಬಲವಾಗೋ ||3||

ಕಾಯಯ್ಯಾ ಕರುಣದಿ ಕಾಯ ನಿನ್ನದು ಗುಣನಿ |
ಕಾಯ ನಿರ್ದೋಷ ಕಾಯಾ ||
ಕಾಯಾ ಐದಳಮಾನ | ಕಾಯ್ದ ಕಲಿವೈರಿ |
ಕಾಯಜಪಿತನ ದೂತಾ ||4||

ಪಂಕಜನಾಭನ ಅಂಕದಲ್ಲಿಪ್ಪ
ಬಿಂಕವ ತಾಳದಿರೊ |
ಸಂಕರುಷಣ ನಮ್ಮ ವಿಜಯವಿಠ್ಠಲನ ಹೃ
ತ್ಪಂಕದೊಳು ತೋರಿಸೊ 5||
← ಶ್ರೀಗುರು ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.