← ಶ್ರೀಕೃಷ್ಣ

ಶೋಕವಾಗುವುದು ಯಾತಕೆ ಎಲಾ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಶೋಕವಾಗುವುದು ಯಾತಕೆ ಎಲಾ |
ಕಾಕುಲಾತೀ ಸಲ್ಲ ಕರಣಶುದ್ಧನಾಗು

ಜೀವಕ್ಕೆ ಎಂಬೆನೆ ಆನಂತಕಲ್ಪಕ್ಕೆ
ಜೀವನಿತ್ಯ ಸುಖೀ ಎಲ್ಲಿದ್ದರೂ
ಸಾವೆ ಹುಟ್ಟೀಯಲ್ಲಿ ಸತತದಲಿ ಚರಿಸಿದರು
ಜೀವ ಉಂಬುವದೆತ್ತ ಪ್ರಾಪ್ತವಾದ ಕ್ಲೇಶ ||1||

ಶರೀರಕೆಂಬೆನೆ ಚೇತನ ತಪ್ಪಿದರೆ
ಇರುವುದು ಜಡವಾಗಿ ಬಿದ್ದುಕೊಂಡು
ಹಿರಿದಾಗಿ ತಿಳಿವುದು ಜಡಕೆ ಲೇಪನವುಂಟೆ
ಚರಾಚರದಲಿ ಇದೆ ಸಿದ್ಧವಾಗಿಪ್ಪಯಾ ||2||

ಪಾರ ನೋಡುವದು ಈ ಪರಿ ಜ್ಞಾನದಲಿದು
ಸಾರ ಕಾಣಿಸದು ಸಂಸಾರದೊಳಗೆ
ಮಾರಜನಕ ನಮ್ಮ ವಿಜಯವಿಠ್ಠಲ ಹರಿಯ
ಸಾರದಲೆ ಅಭಿಮಾನ ಬಿಡದವಗೆ ಇದೆ ಉಂಟು ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.