← ಶ್ರೀಕೃಷ್ಣ
ಬಡವರೊಳಗೆ ಎನಗಿಂತ
ಬಡವರೊಳಗೆ ಎನಗಿಂತ ಅನ್ಯರಿಲ್ಲ |
ಕೊಡುವರೊಳಗೆ ನಿನಗಿಂತ ಅನ್ಯರಿಲ್ಲ||
ಕೊಡುವರೊಳಗೆ ನಿನಗಿಂತ ಅನ್ಯರಿಲ್ಲ||
ದೃಢಭಕ್ತಿ ಎನಗೆ ನಿನ್ನಲಿ ನಿಲಿಸಿ |
ಬಿಡದೆ ಸಲಹಯ್ಯ ಪುರಂದರವಿಟ್ಠಲ ||
ಬಿಡದೆ ಸಲಹಯ್ಯ ಪುರಂದರವಿಟ್ಠಲ ||