← ಇತರೆ

ಸಾರಿ ಭಜಿಸಿರೋ ಟೀಕಾಚಾರ್ಯರಂಘ್ರಿಯಾ

📂 ಇತರೆ
✍️ ವಿಜಯದಾಸ
🏷️ ಕೀರ್ತನೆಗಳು
ಸಾರಿ ಭಜಿಸಿರೋ ಟೀಕಾಚಾರ್ಯರಂಘ್ರಿಯಾ
ಘೋರ ಪಾತಕಾಂಬುಧಿಯ ದೂರ ಮಾಳ್ಪರ

ಮೋದತೀರ್ಥರ ಮತವ ಸಾಧಿಸುವರ |
ಪಾದ ಸೇವ್ಯರ ದುರ್ಬೋಧ ಕಳೆವರ ||1||

ಭಾಷ್ಯತತ್ವ ಸುವಿಶೇಷ ಮಾಳ್ಪರ |
ದೋಷ ದೂರರ ವಾಸವಾದಿ ರೂಪರ||2||

ಶ್ಯಾಮಸುಂದರ ಹರಿಗೆ ಪ್ರೇಮಪೂರ್ಣರ |
ನೇಮನಿತ್ಯದ ನಿಷ್ಕಾಮನಾ ವರ ||3||

ಮೋಕ್ಷದಾತರ ಅಕ್ಷೋಭ್ಯತೀರ್ಥರ ಅ- |
ಶಿಕ್ಷಿತಾದರ ಅಪೇಕ್ಷ ರಹಿತರ ||4||

ವಿಜಯವಿಠಲನ ಅಂಘ್ರಿ ಭಜನೆ ಮಾಳ್ಪರ |
ಕುಜನ ಭಂಜರ ದಿಗ್ವಿಜಯ ರಾಯರ||5||
← ಇತರೆ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.