← ಶ್ರೀಕೃಷ್ಣ

ಸೇತು ಮಾಧವರಾಯನಿಗೆ ನೀನೆ ಪ್ರೀತಿಯಾದವಾ

📂 ಶ್ರೀಕೃಷ್ಣ
✍️ ವಿಜಯದಾಸ
🏷️ ಕೀರ್ತನೆಗಳು
ಸೇತು ಮಾಧವರಾಯನಿಗೆ | ನೀನೆ | ಪ್ರೀತಿಯಾದವಾ |
ಭೂತಳದೊಳಗತಿ ಖ್ಯಾತಿ ಮಾರುತಿ ದೇವಾ

ಪಾತಕಹರ ಪಾವನ ನಾಮ ಶ್ವೇತ ಶರೀರ |
ಭೂತನಾಥನ ಪ್ರಿಯಾ ಭುಜಗಾಧಿಪಶಯ್ಯಾ |
ಮಾತು ಮಾತಿಗೆ ನಗುತ ನೋಡುವ ದೇವ ||1||

ಭಕುತಿಕೊಡು ಬೇಗ ಎನಗೆ ಶ್ರೀ ಲಕುಮಿಪತಿ ಈಗ |
ಅಕಳಂಕ ಚರಿತ ಅತ್ಯದ್ಭುತ ಮುಖ
ವಿಕಸಿತ ಮಹಾಕೃತು ಮಹಿಮಾ ||2||

ಆದಿದೈವನೆ ಸಕಲ ಜೀವಾದಿ ಭೇದವೆ |
ಯಾದವ ಕುಲಮಣಿಯಾದ ಅಣೋರಣಿ
ಮಾಧವ ವಿಜಯವಿಠ್ಠಲ ರಘುರಾಮಾ ||3||
← ಶ್ರೀಕೃಷ್ಣ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.