← ಶ್ರೀಹನುಮಂತ

ಹನುಮಂತ ಬಲವಂತ ಅತಿ ಗುಣವಂತಾ

📂 ಶ್ರೀಹನುಮಂತ
✍️ ವಿಜಯದಾಸ
🏷️ ಕೀರ್ತನೆಗಳು
ಹನುಮಂತ ಬಲವಂತ ಅತಿ ಗುಣವಂತಾ |
ಇನ ಶಶಿ ಶಿಖಿನೇತ್ರ ರೂಪ ಚರಿತ್ರ |
ವನಚರ ಪುಂಗವ ಸನಕ ಸನಂದನ |
ವಿನುತ ಹರಿಚರಣನನುದಿನ ಜಪಿತಾ

ವಾಯುಕುಮಾರ ದೋಷ ಗಜ ಕಂಠೀರಾ |
ರಾಯ ಕಪಿಗೆ ಹರಿಯಾ | ತೋರಿದ ಸಿರಿಯಾ |
ಶ್ರೀಯರಸನ ನಾಮ ಸವಿದ ನಿಸ್ಸೀಮ |
ಪ್ರಿಯ್ಯಾದಿಕೊಂಡು ಗುರುತು ಸಾಗರನರಿತು |
ಮಾಯಾಛಾಯಾ ಗ್ರೀಯಾ ನೋಯ |
ಸಾಯಬಡದ ಸೀತೆಯ ಮುಂದೆ ನಿಂದು |
ತೋಯಜ ಕೈಯಿಂದಾಯತ ಮುದ್ರಿಕುಪಾಯದಿ ಕೊಂಡ ಸ |
ಮಾಯದ ಲಂಕಿಯ ನ್ಯಾಯವುರಹಿದ ಧೇಯಾಂಜನೇಯಾ ||1||

ವರ ಕುಂತಿನಂದನಾ ಕಲಿಯ ಭಂಜನಾ |
ಗರಳನ್ನ ಭುಂಜನಾ | ಉರಗ ಭಂಜನಾ |
ಉರಿತಾಪ ಪರಿಹಾರ | ಕರುಣ ಸಾಗರಾ |
ದುರುಳ ಕೀಚಕರ ಹಿಡಂಬಕಾಂತಕ |
ಕೌರವಾ ಪಾರಾವಾರಾ ಉರಹಿದ ಬಲುಧೀರ ಶರ ಗದಾಧಾರಾ |
ಗುರುವರ ಸುತದಿನ |
ಕರಜನುವರದೊಳು |
ತರಬಲು ಪರಿ ಪರಿಹರಿಸಿದೆ ಸಮರಾ ||2||

ಆನಂದತೀರ್ಥನಾಗಿ ಅತಿ ಹರುಷಯೋಗಿ
ಕಾನನ ಪರಮತಾ ದಹಿಸಿದ ಖ್ಯಾತಾ |
ಭಾನುಕುಲ ಸಾಂದ್ರಾ ಎನಿಸುವ ಚಂದ್ರಾ |
ಧ್ಯಾನಾಮೃತ ಪಾನಾ | ಮುಕ್ತಿ ಸೋಪಾನಾ |
e್ಞÁನಾಹೀನಾ ದೀನಾ ಜನಾ |
ಮಾನಿಸಫಲದಾನಾ ನಿರತ ನಿಧಾನಾ |
ಶ್ರೀನಿಧಿ ವಿಜಯವಿಠ್ಠಲ |
ಶ್ರೀನಿವಾಸನ ಮಾನಸ ಪೂಜಿಪೆ ಗಾನನ
ಮುನಿಗಳ ಆನನಮಣಿ ಪವಮಾನಸೂನು ||3||
← ಶ್ರೀಹನುಮಂತ ವಿಜಯದಾಸ ಕೃತಿಗಳು →

✍️ ಪ್ರತಿಕ್ರಿಯೆ ಬರೆಯಿರಿ

ಗರಿಷ್ಠ 1000 ಅಕ್ಷರಗಳು

ಪ್ರತಿಕ್ರಿಯೆಗಳು ಅನುಮೋದನೆಯ ನಂತರ ಪ್ರಕಟವಾಗುತ್ತವೆ.